28.5 C
Karnataka
Wednesday, March 12, 2025

ಮಂಗಳೂರಿನ ಆಟೋಗಳಿಗೆ ತಮಿಳುನಾಡು ಮಾದರಿಯನ್ನು ಅನುಷ್ಠಾನಗೊಳಿಸಿ : ಶಾಸಕ ಕಾಮತ್

ಬೆ೦ಗಳೂರು: ಮಂಗಳೂರಿನಲ್ಲಿ ಆಟೋರಿಕ್ಷಾಗಳ ನಡುವೆ ಉಂಟಾಗಿರುವ ಸಮಸ್ಯೆಗೆ ಪರಿಹಾರ ಮಾರ್ಗವಾಗಿರುವ ತಮಿಳುನಾಡು ಮಾದರಿಯನ್ನು ಕೂಡಲೇ ಅನುಷ್ಠಾನಗೊಳಿಸಿ ರಿಕ್ಷಾ ಚಾಲಕರ ನೆಮ್ಮದಿಯ ಬದುಕಿಗೆ ಸರ್ಕಾರ ಅನುವು ಮಾಡಿಕೊಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.

ಈ ಬಗ್ಗೆ ಹಿಂದಿನ ಮೂರು ಅಧಿವೇಶನದಿಂದಲೂ ಸರ್ಕಾರದ ಗಮನವನ್ನು ಸೆಳೆಯಲಾಗಿದೆ ಮತ್ತು ಸಾರಿಗೆ ಸಚಿವರಿಗೆ ಪತ್ರವನ್ನೂ ಬರೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಸುಮಾರು ಹತ್ತು ಸಾವಿರದಷ್ಟು ಇರುವ ರಿಕ್ಷಾ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕನಿಷ್ಠ ಈ ಅಧಿವೇಶದಲ್ಲಾದರೂ ಎಲ್ಲಾ ರಿಕ್ಷಾ ಚಾಲಕರುಗಳು ಬಯಸುತ್ತಿರುವ ತಮಿಳುನಾಡು ಮಾದರಿಯ ಪರಿಹಾರ ಮಾರ್ಗವನ್ನು ಅನುಷ್ಠಾನಗೊಳಿಸಿದರೆ ರಿಕ್ಷಾ ಚಾಲಕ ಬಂಧುಗಳ ನಡುವಿನ ಗೊಂದಲ-ಘರ್ಷಣೆ ಕಡಿಮೆಯಾಗುತ್ತದೆ ಎಂದು ಶಾಸಕರು ಹೇಳಿದರು.

ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಕಾಮತ್ ರವರ ಸಲಹೆಗೆ ನನ್ನ ಸಹಮತವಿದ್ದು ಖಂಡಿತವಾಗಿಯೂ ಈ ಬಗ್ಗೆ ಅತೀ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles