17.5 C
Karnataka
Friday, November 22, 2024

ಕಟ್ಟಡ ಕಾಮಗಾರಿಯಲ್ಲಿ ಲೋಪವಾದರೆ ಮಾಲೀಕ, ಇಂಜಿನಿಯರ್ ಮೇಲೆ ಕೇಸು: ಮಹಾನಗರಪಾಲಿಕೆ ಎಚ್ಚರಿಕೆ

ಮಂಗಳೂರು:ಕಟ್ಟಡ ಕಾಮಗಾರಿಯಲ್ಲಿ ಲೋಪವಾದರೆ ಮಾಲೀಕ, ಇಂಜಿನಿಯರ್ ವಿರುದ್ದ ಕ್ರಮ ಜರುಗಿಸಲಾಗುವುದು ಎ೦ದು ಮಹಾನಗರಪಾಲಿಕೆ ಎಚ್ಚರಿಕೆ ನೀಡಿದೆ.

ರಾಜ್ಯದ ಕೆಲವು ‘ನಗರಗಳಲ್ಲಿ ಪರವಾನಿಗೆ ಪಡೆಯದೇ/ಪರವಾನಿಗೆ ಪಡೆದು ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚುವರಿ ಕಟ್ಟಡ (ಮಹಡಿಗಳನ್ನು) ನಿರ್ಮಿಸಿ, ಕಟ್ಟಡವು ಕುಸಿದು ಅನೇಕ ಜನರ ಪ್ರಾಣಹಾನಿಯಾಗಿದ್ದು, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ನಡೆಸಿ ನುರಿತ ಇಂಜಿನಿಯರ್‍ಗಳಿಂದ ವಿನ್ಯಾಸ ಪಡೆದು ಪಾಲಿಕೆಯಿಂದ ವಲಯ ನಿಯಮಾವಳಿ ಅನ್ವಯ ಕಟ್ಟಡ ಪರವಾನಿಗೆ ಪಡೆದು ವಿನ್ಯಾಸದಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ನಿಯಮಾನುಸಾರ ಕಟ್ಟಡವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ.

ಕಟ್ಟಡದ ಕಾಮಗಾರಿಯಲ್ಲಿ ಯಾವುದೇ ಲೋಪದೋಷವಾಗಿ ಕಟ್ಟಡಕ್ಕೆ ಯಾವುದೇ ಅಪಾಯವಾದಲ್ಲಿ ಅಥವಾ ಅನುಮೋದಿತ ನಕ್ಷೆ ಉಲ್ಲಂಘಿಸಿ ಹೆಚ್ಚುವರಿ ಮಹಡಿ ನಿರ್ಮಿಸಿ ಕಟ್ಟಡ ಕುಸಿದು ಯಾವುದೇ ಪ್ರಾಣಹಾನಿ ಸಂಭವಿಸಿದಲ್ಲಿ ಕಟ್ಟಡದ ಮಾಲೀಕರು, ಕಟ್ಟಡದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles