23.9 C
Karnataka
Monday, March 3, 2025

ಸೈಂಟ್‌ ವಿನ್ಸೆಂಟ್‌ ಡಿ. ಪಾವ್ಲ್ ಸೊಸೈಟಿಯ ಶತಮಾನೋತ್ಸವ ವರ್ಷಾಚರಣೆಗೆ ಚಾಲನೆ

ಮಂಗಳೂರು: ಮಂಗಳೂರು ಧರ್ಮಪ್ರಾಂತದ ಸೈಂಟ್‌ ವಿನ್ಸೆಂಟ್‌ ಡಿ. ಪಾವ್ಲ್ ಸೊಸೈಟಿಯ ಶತಮಾನೋತ್ಸವದ ಉದ್ಭಾಟನಾ ಸಮಾರಂಭ ರವಿವಾರ ಬಿಜೈ ಚರ್ಚ್‌ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಧರ್ಮಪ್ರಾಂತದ ವಿಕಾರ್‌ ಜನರಲ್‌ ಮೊನಿಜರ್‌ ವಂ। ಮ್ಯಾಕ್ಸಿಂ ಎಲ್‌. ನೊರೊನ್ಹಾ ಶತಮಾನೋತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ನೂರು ವರ್ಷಗಳಿಂದ ಎಸ್‌ವಿಪಿ ಸಂಘಟನೆಯ ಮೂಲಕ ಧರ್ಮಪ್ರಾಂತದಲ್ಲಿ ಅನೇಕ ಒಳ್ಳೆಯ ಕೆಲಸಗಳಾಗಿವೆ. ಬಡ ವರ್ಗದ ಕಷ್ಟಗಳಿಗೆ ನೆರವಾಗಲಾಗಿದೆ. ಹಲವಾರು ಕುಟುಂಬಗಳ ಕಣ್ಣೀರು ಒರೆಸುವ ಕೆಲಸಗಳಾಗಿವೆ. ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಕೆಲಸ ಮಾಡುವ ಸಂಘಟನೆಯಾಗಿದೆ. ದೇವರ ಕೃಪೆ ಇದ್ದಲ್ಲಿ ನಮ್ಮ ಅಸಾಹಾಯಕತೆಯಲ್ಲೂ ಉತ್ತಮ ಕಾರ್ಯಗಳನ್ನುಮಾಡಲು ಸಾಧ್ಯವಿದೆ ಎಂದರು.
ಮಂಗಳೂರು ಸೆಂಟ್ರಲ್‌ ಕೌನ್ಸಿಲ್‌ನ ಆಧ್ಯಾತ್ಮಿಕ ಸಲಹೆಗಾರ ವಂ। ಫ್ರಾನಿಸ್‌ ಡಿ’ಸೋಜಾ ಶತಮಾನೋತ್ಸವದ ಫೋಷಣೆ ವಾಕ್ಯವನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಂಗಳೂರು ಧರ್ಮಪ್ರಾಂತ್ಯದಲ್ಲಿ ಕಳೆದ ನೂರು ವರ್ಷಗಳಲ್ಲಿ ಹೊಸ ಶಕೆಯನ್ನು ಸಂಘಟನೆ ಬರೆದಿದೆ. ಹಿರಿಯರ ಮೂಲಕ ಸೇವೆ ಮಾಡಲು ಹಾಗೂ ಬಡವರ್ಗಕ್ಕೆ ನೆರವಾಗುವ ಕಾರ್ಯ ವಿಶಿಷ್ಟವಾದುದು. ವಿದ್ಯಾರ್ಥಿವೇತನ, ಬಡ ಕುಟುಂಬಗಳಿಗೆ ಆರ್ಥಿಕ ನೆರವು, ರೋಗಿಗಳಿಗೆ ಚಿಕಿತ್ಸೆಗೆ ಧನ ಸಹಾಯ ಸಹಿತ ನೂರಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಸೆಂಟ್ರಲ್‌ ಕೌನ್ಸಿಲ್‌ನ ಅಧ್ಯಕ್ಷ ಜ್ಯೋ ಕುವೆಲ್ಲೋ ಮಾತನಾಡಿ, ಶತಮಾನೋತ್ಸವದ ಸವಿನೆನಪಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಎಸ್‌.ಎಸ್‌.ವಿ.ಪಿ.ಯ ದತ್ತು ಕುಟಂಬಗಳ ಸುಮಾರು 408 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು, ‘ಆಸ್ರೊ’ ನೂರು ಕುಟಂಬಗಳಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ದುರಸ್ತಿ ಮಾಡಲು ಧನ ಸಹಾಯ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles