ಮಂಗಳೂರು: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಸಂಸ್ಥಾಪನಾದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲಾ ಎನ್.ಎಸ್.ಯು.ಐ ಘಟಕದ ವತಿಯಿಂದ
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಧ್ವಜಾರೋಹಣ ಕಾರ್ಯಕ್ರಮ ಬುಧವಾರ ನಡೆಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, 1971ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ಥಾಪಿಸಿದ ಎನ್.ಎಸ್.ಯು.ಐ
ಅಸಂಖ್ಯಾತ ನಾಯಕರನ್ನು ಹುಟ್ಟು ಹಾಕಿದೆ. ಸಂಘಟನೆಯು ವಿದ್ಯಾರ್ಥಿಗಳ ರಾಜಕೀಯಬದುಕಿಗೆ ಪಾಠಶಾಲೆಯಾಗಿದ್ದು, ಉತ್ತಮ ನಾಯಕತ್ವ ಗುಣ, ಸಾಮಾಜಿಕ ಪ್ರಜ್ಞೆ, ಹೋರಾಟದ
ಗುಣ, ಹೊಣೆಗಾರಿಕೆಯನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಎನ್.ಎಸ್.ಯು.ಐಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ನಾಯಕರಾಗಿ ಬೆಳೆಯಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸುಹಾನ್ ಆಳ್ವ ಪ್ರಾಸ್ತಾವನೆಗೈದರು.
ಮುಖಂಡರಾದ ಬಾತೀಶ್ ಅಳಕೆಮಜಲು, ಸಾಹಿಲ್ ಉಳ್ಳಾಲ, ಕೃಸ್ಟನ್ಮಿನೆಜಸ್, ಸೃಜನ್ ಅಂಚನ್, ಅರ್ಶನ್ ಪೂಜಾರಿ, ಯು.ಟಿ.ಫರೀದ್, ಕೀರ್ತನ್ ಗೌಡ, ಸುಕ್ವಿಂದರ್ ಸಿಂಗ್, ಪ್ರಜೀತ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.
