ಮ೦ಗಳೂರು: ಅಪರಾಧಗಳನ್ನು ತಡೆಗಟ್ಟಲು ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂ.2ರಿಂದ ಜೂ.4 ರ ವರೆಗೆ ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿ ಕಾರಿನ ಗ್ಲಾಸ್ ಗಳಲ್ಲಿ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ಮಾಲಕರ/ಚಾಲಕರ ವಿರುದ್ದ ಒಟ್ಟು 326 ಪ್ರಕರಣ ದಾಖಲಿಸಲಾಗಿದ್ದು, ರೂ. 1,63,000 ದಂಡ. ವಿಧಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯು ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ ಎ೦ದು ಮಂಗಳೂರು ನಗರ ಪೊಲೀಸ್ ಪ್ರಕಟನೆ ತಿಳಿಸಿದೆ.
ಸಾರ್ವಜನಿಕರಿಗೆ ವಿಶೇಷ ಸೂಚನೆ:-
ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಹಾಗೂ ಬ್ಲ್ಯಾಕ್ ಫಿಲ್ಮಂಗಳನ್ನು ಆಳವಡಿಸುವವರ ವಿರುದ್ದ ಕ್ರಮ ಕೈಗೊಳ್ಳಲು ಮತ್ತು ಸದ್ರಿ ಟಿಂಟೆಡ್ ಗ್ಲಾಸ್ ಗಳನ್ನು ತೆರವುಗೊಳಿಸುವಂತೆ ಆದೇಶಿಸಿರುತ್ತದೆ.
ವಾಹನಗಳ ಗಾಜುಗಳಿಗೆ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ. ಸಾರ್ವಜನಿಕರು ತಮ್ಮ ವಾಹನಗಳಿಗೆ ಅಳವಡಿಸಲಾಗಿರುವ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಇತರೆ ವಸ್ತುಗಳನ್ನು ಸ್ವತಃ ತೆಗೆದು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಸಾರ್ವಜನಿಕರು ಸಂಚರಿಸುವ ವೇಳೆ ಯಾವುದೇ ಕಾರಿನ ಗ್ಲಾಸ್ ಗಳಲ್ಲಿ ಬ್ಲ್ಯಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ ಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ, ಕಾರಿನ ನೊಂದಣಿ ಸಂಖ್ಯೆ, ದಿನಾಂಕ ಮತ್ತು ಸಮಯದ ಹಾಗೂ ಸಾಧ್ಯವಾದಲ್ಲಿ ಪೋಟೋ ಹಾಗೂ ಸ್ಥಳದ ವಿವರಗಳ ಮಾಹಿತಿಯನ್ನು ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ವಾಟ್ಸ್ಅಪ್ ಮೂಲಕ ಅಥವಾ ಮೊಬೈಲ್ ಕರೆ ಮಾಡಿ ಸಂಪರ್ಕಿಸಿ ಮಾಹಿತಿಗಳನ್ನು ನೀಡುವಂತೆ ಕೋರಲಾಗಿದೆ.
ನಗರ ಕಂಟ್ರೋಲ್ ರೂಮ್ : 9480802321
ಎಸಿಪಿ ಟ್ರಾಫಿಕ್ : 9480802312
