ಮ೦ಗಳೂರು: ನೆನೆಗುದಿಗೆ ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಯನ್ನು ಶೀಘ್ರವೇ ಪುನರಾಂಭಿಸುವಂತೆ ಮಂಗಳೂರಿಗೆ ಆಗಮಿಸಿದ ನಗರಾಭಿವೃದ್ಧಿ ಸಚಿವರಾದ ಬಿ.ಎಸ್. ಸುರೇಶ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮನವಿ ಮಾಡಿದರು.
ಸುರತ್ಕಲ್ ಮಾರುಕಟ್ಟೆ ಸಂಕೀರ್ಣ ಕಾಮಗಾರಿಗೆ 2013ರ ಸನ್ಮಾನ್ಯ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಅವಧಿಯಲ್ಲಿ ಅನುದಾನ ಮಂಜೂರುಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ನಂತರ ಕಾಮಗಾರಿಯು ಕುಂಟುತ್ತಾ ಸಾಗಿ ಅರ್ಥದಲ್ಲಿ ನಿಂತಿದೆ. ಕಾಮಗಾರಿ ವಿಳಂಬ ನೀತಿಯಿಂದಾಗಿ ಸುರತ್ಕಲ್ ಪ್ರದೇಶದ ಜನತೆಗೆ ಸರಿಯಾದ ಮಾರುಕಟ್ಟೆಯಿಲ್ಲದೇ ಸ್ಥಳೀಯರು ಹಾಗೂ ಮಧ್ಯಮ ಮತ್ತು ಬಡ ವರ್ಗದ ವ್ಯಾಪಾರಸ್ಥರು ತೊಂದರೆಗೊಳಗಾಗಿರುತ್ತಾರೆ ಎಂದು ಇನಾಯತ್ ಅಲಿ ತಮ್ಮ ಮನವಿಯಲ್ಲಿ ಸಚಿವರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ಅನಿಲ್ ಕುಮಾರ್, ಮುಖಂಡರಾದ ಭಾಸ್ಕರ್ ಮೊಯಿಲಿ, ಪ್ರತಿಭಾ ಕುಳಾಯಿ, ಗಿರೀಶ್ ಆಳ್ವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.