ಮಂಗಳೂರು: ಜವಾಹರ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
6ನೇ ತರಗತಿಯ ಆಯ್ಕೆಗೆ ನಡೆಯುವ ಈ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ಸೆಪ್ಟೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ವೆಬ್ಸೈಟ್ www.navodaya.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2025ರ ಜನವರಿ 18ರಂದು ಪರೀಕ್ಷೆ ನಡೆಯಲಿದೆ.ಹೆಚ್ಚಿನ ಮಾಹಿತಿಗೆ ಜವಾಹರ ನವೋದಯ ವಿದ್ಯಾಲಯ ಮುಡಿಪು, ಉಳ್ಳಾಲ ತಾಲೂಕು ದೂರವಾಣಿ ಸಂಖ್ಯೆ 08255-261300 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.