ಮ೦ಗಳೂರು: ಶ್ರದ್ಧೆಯಿಂದ ಸೇವೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ದುಡಿದಾಗ ಜನರ ಗೌರವ ಸಿಗುವುದಲ್ಲದೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಹೊಸಬೆಟ್ಟು ನುಡಿದರು.
ಅವರು ಜೆಸಿಐ ಸುರತ್ಕಲ್ ವತಿಯಿಂದ ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿ ನಡೆದ ಜೆಸಿಐ ಸ್ಥಾಪನಾ ದಿನಾಚರಣೆ ಮತ್ತು ವಿದ್ಯಾರ್ಥಿ ವೇತನ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾಯಕತ್ವದ ತರಬೇತಿಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಜನತೆಗೆ ತಿಳಿಸುವ ಅಗತ್ಯತೆ ಇದೆ ಈ ನಿಟ್ಟಿನಲ್ಲಿ ಜೆಸಿಐ ಸುರತ್ಕಲ್ ಮಹತ್ವದ ಹೆಜ್ಜೆ ಇರಿಸಿದೆ ಎಂದರು.
ವೇದಿಕೆಯಲ್ಲಿ ಜೆಸಿಐ ಭಾರತದ ವಲಯಾಧ್ಯಕ್ಷ ಗಿರೀಶ್ ಎಸ್ ಪಿ, ಜೆಸಿಐ ಭಾರತದ 1983 ರ ರಾಜ್ಯ ಉಪಾಧ್ಯಕ್ಷ ದಿನಕರ ಗೌಡ, ಜೆಸಿ ಅಲ್ಯೂಮಿನಿಯಂ ಕ್ಲಬ್ ಅಧ್ಯಕ್ಷ ಲೋಕೇಶ್ ರೈ, ವಲಯ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು, ನಿಕಟಪೂರ್ವಧ್ಯಕ್ಷ ಜಯರಾಜ್ ಅಚಾರ್ಯ, ಕಾರ್ಯದರ್ಶಿ ಸವಿತಾ ಶೆಟ್ಟಿ, ಸೌಮ್ಯ ಅರ್ ಶೆಟ್ಟಿ, ದಯೇಶ್ ಬಿ ಶೆಟ್ಟಿ, ರಾಹುಲ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಅಧ್ಯಕ್ಷೆ ಜ್ಯೋತಿ ಪಿ ಶೆಟ್ಟಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಜೆಸಿಐ ಸುರತ್ಕಲ್ ಪೂರ್ವಧ್ಯಕ್ಷ ವಿನೀತ್ ಶೆಟ್ಟಿಯವರಿಗೆ ಜೆಸಿಐ ಕಮಲ ಪತ್ರ ನೀಡಿ ಗೌರವಿಸಲಾಯಿತು. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಾದ ಹಿಮಾನಿ.ಪಿ.ಶೆಟ್ಟಿ, ಜಿತಿನ್ ಜೆ ಶೆಟ್ಟಿ, ಜಿನಿತ್ ಜೆ ಶೆಟ್ಟಿ, ದಯೇಶ್ ಬಿ ಶೆಟ್ಟಿ, ಸಿಂಧೂರ ಅರ್ ರಾವ್,ಪಾರ್ಥ್ ಡಿ ಶೆಟ್ಟಿ, ಪದ್ಮಾ ಯೋಗೀಶ್ ನಾಯಕ್, ದಿಶಾ ಜಯೇಶ್ ಗೋವಿಂದ, ಎಂ.ಕೆ.ಸುಬ್ರಹ್ಮಣ್ಯ, ಹಿತಾ ಉಮೇಶ್ ಮುಂತಾದವರನ್ನು ಗೌರವಿಸಲಾಯಿತು. ಹಾಗೂ ವಿದ್ಯಾರ್ಥಿ ವೇತನ, ಜೆಸಿಐ ಪೂರ್ವಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.