23.1 C
Karnataka
Thursday, April 10, 2025

ನಸಿ೦೯ಗ್ ವೃತ್ತಿಪರರಿಗೆ ಬೆಲ್ಜಿಯಂನಲ್ಲಿ ಉದ್ಯೋಗಾವಕಾಶಗಳು

ಮಂಗಳೂರು : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆ.ಎಸ್.ಡಿ.ಸಿ) ಅಧೀನದಲ್ಲಿ ಬರುವ ಅಂತರಾಷ್ಟ್ರೀಯ ವಲಸಿಗರ ಕೇಂದ್ರ ಮುಖಾಂತರ GNM / BSc ನಸಿ೦೯ಗ್‌ ï / PBBN ತೇರ್ಗಡೆಯಾದ ಅಭ್ಯರ್ಥಿಗಳಿಗೆ ಬೆಲ್ಜಿಯಂನಲ್ಲಿ ನಸಿ೦೯ಗ್ ವೃತ್ತಿಪರರಿಗೆ ಉದ್ಯೋಗಾವಕಾಶಗಳಿರುತ್ತದೆ. 35 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೃತ್ತಿ ಅನುಭವ: ಒಂದು ವರ್ಷದ ಕ್ಲಿನಿಕಲ್ ಪ್ರಾಕ್ಟೀಸ್ ಅನುಭವ ಹೊಂದಿರಬೇಕು. ಇಂಗ್ಲೀಷ್‌ ಭಾಷೆ ಜ್ಞಾನ: ಐ.ಇ.ಎಲ್.ಟಿ.ಎಸ್ ಅಂಕ ( (IELTS Score)) (ಆದ್ಯತೆ 7 / ಒಟ್ಟು 6 ಅಂಕಗಳು ಇರಬೇಕು) ಅಥವಾ ಓ.ಇ.ಟಿ ಅಂಕ((OET Score) (ಆದ್ಯತೆ ಃ ಕನಿಷ್ಠ C+ ಇರಬೇಕು), ಆದ್ಯತೆಯ ವಿಶೇಷ ವಿಭಾಗ: ಹಿರಿಯರ & ವೃದ್ಧರ ಆರೈಕೆ, ಮಾನಸಿಕ ಆರೈಕೆ, ಮಾಸಿಕ ವೇತನ: ರೂ.1.9 ಲಕ್ಷ (ಮೊದಲ ವರ್ಷದ ತರಬೇತಿ ಸಮಯದಲ್ಲಿ) ರೂ.2.8 ಲಕ್ಷ (ರಿಜಿಸ್ಟರ್ಡ್ ನರ್ಸ್), ಉಚಿತ ವೀಸಾ ಮತ್ತು ವಿಮಾನ ಟಿಕೆಟ್ ನೀಡಲಾಗುತ್ತದೆ. ಕಡಿಮೆ ಬಾಡಿಗೆಯ ಸುಸಜ್ಜಿತ ಮನೆ ಹಾಗೂ ವೈದ್ಯಕೀಯ ಭತ್ಯೆ (ಮೊದಲ ವರ್ಷದ ತರಬೇತಿ ಸಮಯದಲ್ಲಿ) ನೀಡಲಾಗುತ್ತದೆ. Pಖ ಪಡೆಯುವ ಅವಕಾಶ, ಬೆಲ್ಜಿಯಂ ದೇಶದ ಆಕರ್ಷಕ ಸಾಮಾಜಿಕ ಸೌಲಭ್ಯಗಳು, ವೇತನ ಸಹಿತ ರಜೆ ಹಾಗೂ ಇತ್ಯಾದಿಗಳನ್ನು ನೀಡಲಾಗುತ್ತದೆ. ಸಂದರ್ಶನ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.
ಕಡ್ಡಾಯ ಬದ್ಧತೆಗಳು: 6 ತಿಂಗಳ ಆಫ್‍ಲೈನ್ ಡಚ್ ಭಾಷೆ ತರಬೇತಿ (ಭಾರತದಲ್ಲಿ), ಬೆಲ್ಜಿಯಂನಲ್ಲಿ 1 ವರ್ಷದ ತರಬೇತಿ ಹಾಗೂ ಹಿರಿಯರ ಆರೈಕೆ ಘಟಕದಲ್ಲಿ ಆರೋಗ್ಯ ಸಹಾಯಕ((Health Care Assistant)) ಅರೆಕಾಲಿಕ ಕೆಲಸ, ತರಬೇತಿ ಪೂರ್ಣಗೊಳಿಸಿ ಹೆಚ್.ಬಿ.ಒ5(ಊಃಔ5) ಪ್ರಮಾಣಪತ್ರ ಪಡೆದ ನಂತರ, “ರಿಜಿಸ್ಟರ್ಡ್ ನರ್ಸ್” ಆಗಿ ಪೂರ್ಣಾವಧಿ ಉದ್ಯೋಗ ಪಡೆಯಬಹುದು.
ಆಸಕ್ತ ಅಭ್ಯರ್ಥಿಗಳು ಸಿ.ವಿ ಮತ್ತು ದಾಖಲೆಗಳನ್ನುhr.imck@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಅಂತರಾಷ್ಟ್ರೀಯ ವಲಸೆ ಕೇಂದ್ರ – (IMC-K) 4ನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, IಖಿI ಕಾಲೇಜು ಆವರಣ, ಡೈರಿ ವೃತ್ತ, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles