21.7 C
Karnataka
Thursday, November 21, 2024

ಮೇ 9 ರಿಂದ ಮಾವು, ಹಲಸು ಮೇಳ

ಮಂಗಳೂರು:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಮಾವು ಮತ್ತು ಹಲಸು ಮೇಳ ಇದೇ ಮೇ9 ರಿಂದ 13ರ ವರೆಗೆ ನಡೆಯಲಿದ್ದು, ಮೇ 9ರಂದು ಮಧ್ಯಾಹ್ನ 12 ಗಂಟೆಗೆ ನಗರದ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

 ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ. ಅವರು ಕಾರ್ಯಕ್ರಮ ಉದ್ಘಾಟಿಸಲಿರುವರು.

  ಮೇಳದಲ್ಲಿ ಒಟ್ಟು ಅರ್ಹ 20 ವ್ಯಾಪಾರಸ್ತರಿಗೆ ಮಾವು ಮತ್ತು ಹಲಸು ಹಣ್ಣು ಹಾಗೂ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಷರತ್ತು ಹಾಗೂ ನಿಬಂಧನೆಗಳನೊಳಪಟ್ಟಂತೆ ಅವಕಾಶ ಕಲ್ಪಿಸಲಾಗಿದೆ.

 ಮೇಳದಲ್ಲಿ ಮಾವು ಬೆಳೆಯ ವಿವಿಧ ತಳಿಗಳಾದ ಅಲ್‍ಫಾನ್ಸೋ, ಬಾದಾಮಿ, ಮಲ್ಲಿಕಾ, ರಸಪುರಿ, ಮಲಗೋವಾ, ಸೆಂಡೂರ, ಕಾಲಪಾಡ್, ತೋತಾಪುರಿ, ಬೆಂಗನ್ ಪಲ್ಲಿ, ಶುಗರ್ ಬೇಬಿ, ಇತ್ಯಾದಿ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕವಾಗಿ ಮಾಗಿಸಲಾದ ಹಣ್ಣುಗಳು ಮಾರಾಟದಲ್ಲಿ ಲಭ್ಯವಿರುತ್ತದೆ ಹಾಗೂ ಮಾವು ಬೆಳೆಯ ವಿವಿಧ ತಳಿಗಳ ಪ್ರದರ್ಶನ ಮಾಡಲಾಗುವುದು. 

  ಹಲಸು ಬೆಳೆಯ ವಿವಿಧ ಉತ್ಪನ್ನಗಳಾದ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ, ಸಾಟ, ಚಿಪ್ಸ್, ಇತ್ಯಾದಿಗಳು ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾರಾಟಕ್ಕೆ ಅನುವು ಮಾಡಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾವು ಮತ್ತು ಹಲಸು ಮೇಳದ ಸದುಪಯೋಗ ಪಡಿಸಿಕೊಳ್ಳಲು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles