ಮಂಗಳೂರು: ನಗರದ ಕದ್ರಿ ಪಾರ್ಕ್ ನ ರಸ್ತೆಯಲ್ಲಿ ಮರದಲ್ಲಿದ್ದ ಹೆಬ್ಬಾವೊಂದನ್ನು ಉರಗ ರಕ್ಷಕ ಭುವನ್ ಮತ್ತು ತಂಡ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಗಳ ಸಹಕಾರದೊ೦ದಿಗೆ ಯಶಸ್ವಿಯಾಗಿ ಕೆಳಗಿಳಿಸಿದರು.
ಕದ್ರಿ ಪಾರ್ಕ್ ರಸ್ತೆ ಬದಿಯ ಮರವನ್ನೇರಿ ವಿರಾಮದಲ್ಲಿದ್ದ ಹೆಬ್ಬಾವು ಶನಿವಾರ ಮಧ್ಯಾಹ್ನ 3 ಮೂರು ಗಂಟೆಗೆ ಸಾವ೯ಜನಿಕರು ನೋಡಿದ್ದರು. ಸಾಮಾನ್ಯವಾಗಿ ಹೆಬ್ಬಾವುಗಳು ವಿರಾಮಕ್ಕೆ ಮರವನ್ನು ಆಶ್ರಯಿಸುವುದು ಸಾಮಾನ್ಯವಾದರೂ, ಜನ ನಿಬಿಡ ಪ್ರದೇಶ ಆಗಿರುವುದರಿಂದ ಎಚ್ಚರಿಕೆ ಅಗತ್ಯವಿತ್ತು. ಭುವನ್ ಬೃಹತ್ ಮರವನ್ನು ಅಗ್ನಿಶಾಮಕ ದಳದ ಏಣಿಯನ್ನೇರಿ ಹೆಬ್ಬಾವಿನ ಹಿಂದೆ ಬಿದ್ದಿದ್ದರು.ಆಗ ಎಚ್ಚರಗೊಂಡ ಹಾವು ಕೊಂಬೆಯಿಂದ ಕೊಂಬೆಗೆ ನಿರಾಯಸವಾಗಿ ಹೋಗುತ್ತಿತ್ತು.
ಕೊನೆಗೂ ಬಾನುವಾರ ಬೆಳಿಗ್ಗೆ 10.30ರ ವೇಳೆಗೆ ಭುವನ್ ಹಾವನ್ನು ಮರದಿಂದ ಕೆಳಗಿಳಿಸಿ ಚೀಲಕ್ಕೆ ತುಂಬಿಸಿ ” ಆಪರೇಷನ್ ಪೆರ್ಮರಿ” ಯಶಸ್ವಿಗೊಳಿಸಿದರು.