20.6 C
Karnataka
Friday, November 22, 2024

ಕಲಾಕುಲ್: ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್

ಮ೦ಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು ಎ೦ದು ಮಾಂಡ್ ಸೊಭಾಣ್.ಗುರಿಕಾರ ಎರಿಕ್ ಒಝೇರಿಯೊ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕೊ೦ಕಣಿ ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ ಮಾಂಡ್ ಸೊಭಾಣ್ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದೆ. ಕಲಾಕುಲ್’ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿಯನ್ನು ಆರಂಭಿಸಿ, ಆಧುನಿಕ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 13 ವರ್ಷಗಳಿಂದ ಖಾಸಗಿಯಾಗಿ ಕೊಂಕಣಿ ರಂಗಭೂಮಿ ಡಿಪ್ಲೋಮಾ ನಡೆಸುತ್ತಿದ್ದು, ಇದುವರೆಗೆ ನೂರಾರು ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆದಿದ್ದಾರೆ. ಸುಮಾರು 50 ನಾಟಕ, ಕಿರುನಾಟಕಗಳ 250 ಕ್ಕೂ ಮಿಕ್ಕಿ ಪ್ರದರ್ಶನಗಳು ದೇಶ ವಿದೇಶಗಳಲ್ಲಿ ನಡೆದಿವೆ.ಎ೦ದರು. ಮಾಂಡ್ ಸೊಭಾಣ್ ಸಂಸ್ಥೆಯುಕಲಾಂಗಣ’ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದ್ದು ಇಲ್ಲಿ ಅನನ್ಯ ಬಯಲು ರಂಗ ಮಂದಿರದೊಡನೆ, ರಂಗ ತರಬೇತಿ ಮತ್ತು ಸಂಶೋಧನೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ನೇತೃತ್ವದ ತಂಡ ಆಗಮಿಸಿ, ಪರಿಶೀಲಿಸಿದ ಬಳಿಕ ಕಲಾಕುಲ್ ವತಿಯಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ನಡೆಸಲು ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಆಡಳಿತ ಸಮಿತಿ ರಚಿಸಲಾಗಿದ್ದು, ಅದು ಸಭೆ ಸೇರಿ ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅದರಂತೆ ಸೂಕ್ತ ತಯಾರಿ ನಡೆಸಿದ್ದು, ಎನ್ಎಸ್ಡಿ ಮತ್ತು ರಂಗಾಯಣದಿ೦ದ ಪದವಿ ಪಡೆದ ಉಪನ್ಯಾಸಕರನ್ನು ನೇಮಿಸಲಾಗುವುದು.
ಜುಲೈ 1 ರಿಂದ ಆರಂಭವಾಗುವ 2024-25 ನೇ ಶೈಕ್ಷಣಿಕ ವರ್ಷದಿಂದ ಈ ರಂಗ ತರಬೇತಿ ಡಿಪ್ಲೋಮಾ ಕೋರ್ಸನ್ನು ಆರಂಭಿಸಲಾಗುವುದು. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದ ಯಾವುದೇ ಮಾತೃಭಾಷಿಕ ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆಯಲು ಅರ್ಹರಾಗಿದ್ದು, ಒಂದು ವರ್ಷದ ಎರಡು ಸೆಮಿಸ್ಟರ್ನ ಈ ಕೋರ್ಸ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ. ಅಂತಿಮ ಪರೀಕ್ಷೆಯನ್ನು ವಿಶ್ವವಿದ್ಯಾಲಯವೇ ನಡೆಸುತ್ತದೆ. ಇದು ಪೂರ್ಣಕಾಲೀಕ ಕೋರ್ಸ್ ಆಗಿದ್ದು, ಈ ಕೋರ್ಸ್ ಪಡೆದವರಿಗೆ ಶಾಲೆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಕ್ಷಕರಾಗಿ ದುಡಿಯಲು ಅವಕಾಶ ಲಭಿಸಲಿದೆ. ಅಗತ್ಯವುಳ್ಳವರಿಗೆ ಹಾಸ್ಟೆಲ್ ಸೌಲಭ್ಯವಿದೆ.
ಈ ಕೋರ್ಸ್ಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಅರ್ಜಿಗಳನ್ನು www.manddsobhann.org ಡೌನ್ಲೋಡ್ ಮಾಡಿ, ಸರಿಯಾಗಿ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ, ಜೂನ್ 15ರೊಳಗೆ ಕಲಾಂಗಣ, ಮಕಾಳೆ, ಶಕ್ತಿನಗರ, ಮಂಗಳೂರು 575016 ಇಲ್ಲಿಗೆ ಅಂಚೆ ಮೂಲಕ ಅಥವಾ ಕೈಯಾರೆ ತಲುಪಿಸಬೇಕು.ಹೆಚ್ಚಿನ ಮಾಹಿತಿಗಾಗಿ (63640 22333-ಆಡಳಿತಾಧಿಕಾರಿ ಅಥವಾ 81052 26626-ಕಛೇರಿ) ಇಲ್ಲಿ ಸಂಪರ್ಕಿಸಬಹುದು ಎ೦ದವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಲುವಿ ಜೆ. ಪಿಂಟೊ – ಅಧ್ಯಕ್ಷ, ಮಾಂಡ್ ಸೊಭಾಣ್,ಆಡಳಿತ ಸಮಿತಿ ಸದಸ್ಯರಾದ ವಿದುಷಿ ರಾಜಶ್ರೀ ಎಸ್ ಶೆಣೈ, ಡಾ ಎಸ್ಬಿಎಮ್ ಪ್ರಸನ್ನ,ಸದಸ್ಯ ಕಾರ್ಯದರ್ಶಿ,ಆಡಳಿತಾಧಿಕಾರಿ,
ಅರುಣ್ ರಾಜ್ ರೊಡ್ರಿಗಸ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles