ಮ೦ಗಳೂರು: ಗೃಹಲಕ್ಷ್ಮೀ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 3.44 ಲಕ್ಷ ಫಲಾನುಭಗಳು ನೋಂದಣಿ ಮಾಡಿದ್ದು ಎಲ್ಲ ಫಲಾನುಭಗಳಿಗೂ ಮಾಸಿಕ ಎರಡು ಸಾವಿರ ರೂ. ಜಮೆ ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದ ಜಮೆಯಾಗದ ಫಲಾನುವಭವಿಗಳ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗುತ್ತಿದೆ ಎ೦ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ನೆಹರೂ ಮೈದಾನ್ ನಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವ ಸ೦ದೇಶ ನೀಡಿದ ಅವರು ಯಾರೊಬ್ಬರೂ ಹಸಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 2.48 ಲಕ್ಷ ಫಲಾನುಭಗಳಿದ್ದಾರೆ. ಅವರಿಗೆ ನಗದು ವರ್ಗಾವಣೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಇದುವರೆಗೂ 17.30 ಕೋಟಿ ರೂಪಾಯಿ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಮೂಲಕ ಬಡವರ ಬಾಳಿನಲ್ಲಿ ನೆಮ್ಮದಿ ತಂದಿದ್ದೇವೆ.ಶಕ್ತಿಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ಭಾಗಗಳ ಘಟಕಗಳಲ್ಲಿ ಇದುವರೆಗೆ 183 ಲಕ್ಷ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸದುಪಯೋಗ ಪಡೆದು ಉಚಿತವಾಗಿ ಪ್ರಯಾಣಿಸಿದ್ದು ಒಟ್ಟು ರೂ. 6072 ಲಕ್ಷ ಆದಾಯ ಬಂದಿರುತ್ತದೆ ಎ೦ದರು.
ಜಿಲ್ಲೆಯಲ್ಲಿ 7 ಬಹು ಗ್ರಾಮ, ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಕಿನ್ನಿಗೋಳಿ, ಮರವೂರು, ಕರೋಪಾಡಿ, ಸಂಗಬೆಟ್ಟು, ಮಾಣಿ ಸರಪಾಡಿ ಮತ್ತು ನರಿಕೊಂಬು ಬಹುಗ್ರಾದು ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿರುತ್ತವೆ.021-22ನೇ ಸಾಲಿನಲ್ಲಿ ಒಟ್ಟು 6 ಹೊಸ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ತೆಗೆದುಕೊಳ್ಳಲಾಗಿದ್ದು, ಮೂಡಬಿದ್ರೆ ಮತ್ತು ಉಳಾಯಿಬೆಟ್ಟು ಯೋಜನೆಯು ಪ್ರಗತಿಯಲ್ಲಿರುತ್ತದೆ. ಉಳಿಕೆ ಯೋಜನೆಗಳು ಧ ಹಂತದಲ್ಲಿರುತ್ತದೆ.ಉದ್ಯೋಗ ಖಾತರಿ ಯೋಜನೆಯಡಿ 2023-24 ನೇ ಸಾಲಿನವರೆಗೆ ದ.ಕ. ಜಿಲ್ಲೆಯಲ್ಲಿ 1,62,540 ಕುಟುಂಬಗಳಿಗೆ ಉದ್ಯೋಗ ಚೀಟಿಯನ್ನು ತರಿಸಲಾಗಿದೆ. 2023-24ನೇ ಸಾಲಿನಲ್ಲಿ 17ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನಿಗದಿ ಪಡಿಸಿದ್ದು, ಸೆಪ್ಟೆಂಬರ್ 2023ರ ಅಂತ್ಯಕ್ಕೆ 7.58 ಲಕ್ಷ ಮಾನವ ದಿನಗಳನ್ನು ಸೃಜಿಸಿ ರೂ. 4129.11 ಲಕ್ಷ ವೆಚ್ಚ ಮಾಡಲಾಗಿದೆ ಎ೦ದವರು ಹೇಳಿದರು.
ಇಂದಿನ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ನಾಡಿನ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ನೆನೆದು ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದರ ಮೂಲಕ ಅವುಗಳನ್ನು ಅಭಿವೃದ್ಧಿಗೊಳಿಸುವ ಮಹತ್ವದ ದಿನ ಹಾಗೂ ಇದರ ಉಳಿಗಾಗಿ ನಾವೆಲ್ಲರೂ ದೀಕ್ಷೆ ತೊಡುವ ದಿನ ಇದಾಗಿದೆ ಎಂದು ಭಾವಿಸುತ್ತೇನೆ.ಬಹುಭಾಷೆ, ಧರ್ಮ ಮತ್ತು ಬಹುಸಂಸ್ಕೃತಿಗಳ ಜಿಲ್ಲೆ ನಮ್ಮದು. ಈ ವೈವಿಧ್ಯತೆಯಲ್ಲಿಯೇ ಏಕತೆ ಕಂಡುಕೊಂಡ ಹೆಮ್ಮೆಯ ಪರಂಪರೆಯ ವಾರಸುದಾರರು ನಾವು. ಈ ಸಂಬಂಧ ಮುರಿದುಬೀಳಲು ಅವಕಾಶ ನೀಡದೆ ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎ೦ದರು.
ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಮ೦ಜುನಾಥ್ ಭ೦ಡಾರಿ, ಮೇಯರ್ ಸುಧೀರ್ ಶೆಟ್ಟಿ , ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ , ಮ೦ಗಳೂರು ಪೊಲೀಸದ ಆಯುಕ್ತ ಅನುಪಮ್ ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು.