ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿರುವ ಚಲನಚಿತ್ರೋತ್ಸವ ಗುರುವಾರದಿಂದ ಪ್ರಾರಂಭವಾಗಲಿದೆ.
ನಗರದ ಬಿಜೈ ಭಾರತ್‍ಮಾಲ್ ನಲ್ಲಿ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್ ನಲ್ಲಿ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಗುರುವಾರ ಪ್ರದರ್ಶನಗೊಳ್ಳುವ ಚಿತ್ರಗಳು ಈ ರೀತಿ ಇವೆ.
ಬೆಳಿಗ್ಗೆ 10 – ಅರಿಷಡ್ವರ್ಗ (ಕನ್ನಡ), 12:30 – 19.20.21 (ಕನ್ನಡ), 3:30 – ಮಧ್ಯಂತರ (ಕನ್ನಡ), ರಾತ್ರಿ 8 – ಕಾಂತಾರ (ಕನ್ನಡ).
ಜನವರಿ 3: ಬೆಳಿಗ್ಗೆ 10:15 – ಸಾರಾಂಶ (ಕನ್ನಡ), 12:45 – ತರ್ಪಣ (ಕೊಂಕಣಿ), 3:15 – ಶುದ್ಧಿ (ಕನ್ನಡ), 3:45 – ಕುಬಿ ಮತ್ತು ಇಯಾಳ(ಕನ್ನಡ), ರಾತ್ರಿ 8 – ಗರುಡ ಗಮನ ವೃಷಭ ವಾಹನ(ಕನ್ನಡ).
ಚಿತ್ರ ವೀಕ್ಷಣೆಗೆ ಪ್ರವೇಶ ಉಚಿತವಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲಿ ಪ್ರವೇಶ ನೀಡಲಾಗುವುದು.