20.5 C
Karnataka
Sunday, January 5, 2025

ಕರಾವಳಿ ಉತ್ಸವ: ಕಲಾತಂಡಗಳಿಂದ ಅರ್ಜಿ ಆಹ್ವಾನ

ಮಂಗಳೂರು: ಕರಾವಳಿ ಉತ್ಸವವು ಡಿಸೆಂಬರ್ 21ರಿಂದ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದು, ಕರಾವಳಿ ಉತ್ಸವದ ವಿವಿಧ ವೇದಿಕೆಗಳಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೀಡಲು ಜಿಲ್ಲೆಯ ವಿವಿಧ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಕಲಾತಂಡಗಳು ಅರ್ಜಿಗಳನ್ನು ಸಲ್ಲಿಸುವಾಗ ತಮ್ಮ ಕಲಾಪ್ರಕಾರ, ಈ ಹಿಂದೆ ನೀಡಿರುವ ಕಾರ್ಯಕ್ರಮಗಳ ಬಗ್ಗೆ ವಿವರ,ಛಾಯಚಿತ್ರಗಳು ಈ ಬಗ್ಗೆ ಪ್ರತಿಕಾ ವರದಿಗಳನ್ನೊಳಗೊಂಡ ದಾಖಲೆಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಸಂಸ್ಕ್ರತಿ ಇಲಾಖೆ, ತುಳುಭವನ, ಉರ್ವಸ್ಟೋರ್, ಮಂಗಳೂರು ಇಲ್ಲಿಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 18 ಕೊನೆಯ ದಿನ.

ಸಾಂಸ್ಕ್ರತಿಕ ಕಾರ್ಯಕ್ರಮಗಳು ಕರಾವಳಿ ಜಿಲ್ಲೆಗಳ ಕಲೆ ಮತ್ತು ಸಂಸ್ಕ್ರತಿಯನ್ನು ಪ್ರತಿಬಿಂಬಿಸುವಂತಿರಬೇಕು. ಹಿಂದಿನ ವರ್ಷಗಳಲ್ಲಿ ಕರಾವಳಿ ಉತ್ಸವದಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ತಂಡಗಳನ್ನು ಪರಿಗಣಿಸಲಾಗುವುದಿಲ್ಲ . ಸಾಂಸ್ಕ್ರತಿಕ ಸಮಿತಿಯಿಂದ ಆಯ್ಕೆಯಾದ ಕಲಾತಂಡಗಳಿಗೆ ಮಾತ್ರ ಮಾಹಿತಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 karavali Utsav

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles