24 C
Karnataka
Thursday, January 9, 2025

ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ‌ ಜಿಲ್ಲೆಗೆ ಭೇಟಿ

ಮ೦ಗಳೂರು: ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಅಧಿಕಾರ ವಹಿಸಿ ಕೊಂಡ ನಂತರ ಮೊದಲ ಸಭೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿ ಕೊಂಡಿದ್ದು “ಮಹಿಳಾ ಸದಸತ್ವ ಅಭಿಯಾನ ಮತ್ತು ಮಹಿಳಾ ಸಮ್ಮಾನ್” ಶೀರ್ಷಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
.ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೌಮ್ಯ ರೆಡ್ಡಿಯವರು ಕರ್ನಾಟಕ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವಲ್ಲಿ ಸಫಲವಾಗಿದೆ. ಅದೇ ರೀತಿ ಮಹಿಳೆಯರು ಜೀವನದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯುವಲ್ಲಿ ಪ್ರಯತ್ನಿಸಿ ಸಫಲರಾಗಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಹಿಳಾ ಕಾಂಗ್ರೆಸ್ ಉಸ್ತುವಾರಿಗಳಾದ ಮಂಜುನಾಥ್ ಭಂಡಾರಿಯವರು ಮಹಿಳೆಯರು ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಮಾತ್ರ ಮಹಿಳಾ ನಾಯಕತ್ವ ಬೆಳೆಯುವುದು. ಮಹಿಳೆಯರು ತಮ್ಮ‌ ಸ್ವಪ್ರಯತ್ನದಿಂದ ರಾಜಕೀಯದಲ್ಲಿ ಮುಂದೆ ಬರಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾರವರು ಮಾತನಾಡಿ ಪಂಚ ಗ್ಯಾರಂಟಿಗಳಿಂದ ದಕ್ಷಿಣ ಕನ್ನಡದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಮಾತನಾಡಿ . ಅಧ್ಯಕ್ಷೆ ಶಾಲೆಟ್ ಪಿಂಟೋರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಮಾಜಿ ಸಚಿವರುಗಳಾದ ರಮಾನಾಥ ರೈ ಹಾಗೂ ಅಭಯ ಚಂದ್ರ ಜೈನ್ ರವರು ಮಹಿಳಾ ಸಂಘಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕರ್ನಾಟಕ ಗೇರು ಆಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿಯವರು ಮಾತನಾಡಿ ಮಹಿಳಾ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹೆಚ್ಚು ಮಹಿಳಾ ಸದಸ್ಯರನ್ನು ನೋಂದಣಿ ಮಾಡಿಸಿದ ಮಂಗಳೂರು ದಕ್ಷಿಣ ಬ್ಲಾಕ್ ನ ಶೈಲಜಾ ನೀತಾ ಡಿ ಸೋಜಾ ಮತ್ತು ಗೀತಾ ಅತ್ತಾವರ್, ಬೆಳ್ತಂಗಡಿ ಬ್ಲಾಕ್ ನ ಮಧುರಾ ರಾಘವ್, ಮಂಗಳೂರು ನಗರ ಬ್ಲಾಕ್ ನ ಸ್ವರೂಪ ಶೆಟ್ಟಿ, ಉಳ್ಳಾಲ ಬ್ಲಾಕ್ ನ ಸುರೇಖಾ ಚಂದ್ರಹಾಸ್,ಆರಿಫಾ ಮುಂತಾದವರನ್ನು ಗೌರವಿಸಲಾಯಿತು. ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಅತಿಥಿಗಳನ್ನು ಸ್ವಾಗತಿಸಿ ರು. ಉಷಾ ಅಂಚನ್ ಜಿರೂಪಿಸಿದರು. ಮಾಜಿ ಶಾಸಕಕಿ ಶಕುಂತಲಾ ಶೆಟ್ಟಿ, ಮುಏ೦ಡರಾದ ಜಿ. ಎ ಭಾವ , ಪದ್ಮರಾಜ್ ಪೂಜಾರಿ, ಲಾವಣ್ಯ ಬಲ್ಲಾಳ್, ರಕ್ಷಿತ್ ಶಿವರಾಮ್, ಕೃಪಾ ಆಳ್ವಾ, ಸುರೇಂದ್ರ ಕಂಬಳಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ನಾಯಕಿಯರು ಮೊದಲದವರು ಉಪಸ್ಥಿತರಿದ್ದರು


Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles