ಮ೦ಗಳೂರು: ಸಂತ ಅನ್ನಾ ಚರ್ಚ್ ಕೆಲರಾಯ್, ಇಲ್ಲಿನ ‘ಭಾರತೀಯ ಕಥೋಲಿಕ್ ಯುವ ಸಂಚಾಲನ’ವು ಭಾನುವಾರ ‘ಗಾದ್ಯಾಂತ್ ಗಮ್ಮತ್’ (ಗದ್ದೆಯಲ್ಲಿ ಗಮ್ಮತ್) ಎಂಬ ಕಾರ್ಯಕ್ರಮವನ್ನು ಕೆಲರಾಯ್ ತಾರಿಗುಡ್ಡೆ ಗದ್ದೆಯಲ್ಲಿ ಆಯೋಜಿಸಿತ್ತು.
ಬೆಳಿಗ್ಗೆ 9.30 ಗಂಟೆಗೆ ಸಂತ ಅನ್ನಾ ದೇವಾಲಯದ ಧರ್ಮಗುರುಗಳಾದ ಫಾ| ಸಿಲ್ವೆಸ್ಟರ್ ಡಿಕೋಸ್ಟಾರವರು ಆಶೀರ್ವಚನದ ಮೂಲಕ
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಐಸಿವೈಎಮ್ ಸಚೇತಕರಾದ ವಿನೋದ್ ಪಿರೇರಾ, ಚರ್ಚಿನ ಪಾಲನಾ ಸಮಿತಿಯ
ಉಪಾಧ್ಯಕ್ಷರಾದ ಸಂತೋಷ್ ಡಿಕೋಸ್ಟಾ, ಕಾರ್ಯದರ್ಶಿ ಸೆಲಿನ್ ಡಿಮೆಲ್ಲೊ, ಫಾ| ರೋಶನ್ ಫೆರ್ನಾಂಡಿಸ್, ಕಾರ್ಪರೇಟರ್ ರಘು
ಸಾಲಿಯಾನ್, ಜಯಂತಿ ದೇವಸ ಮುಂತಾದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು. ಸರ್ವಧರ್ಮಗಳ ಸಹಕಾರದಿಂದ ಈ ಕಾರ್ಯಕ್ರಮಕ್ಕೆ ಕಳೆಬಂದಿತ್ತು.
ಅನೇಕ ವರ್ಷಗಳಿಂದ ತೆನೆಹಬ್ಬಕ್ಕೆ ತೆನೆಯನ್ನು ದಾನ ಮಾಡುತ್ತಿರುವ ಕೃಷಿಕ ಜ್ಯೂಡ್ ಕರ್ನೆಲಿಯೊ ಅವರನ್ನು ಈ ಸಂದರ್ಭದಲ್ಲಿ
ಸನ್ಮಾನಿಸಲಾಯಿತು. ‘ಪೆಪ್ಸಿ ಲಕ್ಕಿ ಡ್ರಾ’ದಲ್ಲಿ ಅನೇಕರು ಭಾಗವಹಿಸಿ ಬಹುಮಾನ ಗೆದ್ದರು. ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸ್ಪರ್ಧೆಗಳನ್ನು ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ನಡೆಸಿ, ಸಂಜೆಯ ಸಮಾರೋಪ
ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮನೀಶಾ ಡಿಸೋಜಾ ಸ್ವಾಗತಿಸಿದರು. ಅಲಿಷಾ ಕ್ರಾಸ್ತಾ ಧನ್ಯವಾದ ಸಮರ್ಪಣೆ ಗೈದರು.ಕಾರ್ಯಕ್ರಮವನ್ನು ಸಂತೋಷ್ ಡಿಕೋಸ್ಟಾ ಹಾಗೂ ಬೆನೊಯ್ ಡಿಸೋಜಾ ನಡೆಸಿಕೊಟ್ಟರು.