ಮಂಗಳೂರು: ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ 2025ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್ ಇಂಜಿನಿಯರಿಂಗ್ ಹಾಗೂ ನಾನ್-ಇಂಜಿನಿಯರಿಂಗ್ ಡಿಪ್ಲೋಮಾ ಪೂರ್ಣಾವಧಿಯ ಕೋರ್ಸ್‍ಗಳಿಗೆ ಎರಡು ವಿಧಾನಗಳಲ್ಲಿ ಪ್ರವೇಶಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ನೀಡಿರುವ ಆದ್ಯತೆ ಮತ್ತು ಮೆರಿಟ್ ಹಾಗೂ ರೋಷ್ಟರ್‍ಗನುಗುಣವಾಗಿ (ಪಾಲಿಮರ್ ಕೋರ್ಸ್‍ನ್ನು ಹೊರತುಪಡಿಸಿ) ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಮೆರಿಟ್ ಆಧಾರಿತ ಆನ್‍ಲೈನ್ ಪ್ರವೇಶಾತಿ ಪ್ರಕ್ರಿಯೆಯ ವಿವಿಧ ಹಂತಗಳ ತಾತ್ಕಾಲಿಕ ವೇಳಾಪಟ್ಟಿ:-
ಇಲಾಖೆಯ ಅಧಿಕೃತ ವೆಬ್‍ಸೈಟ್‍ಗಳಿಂದ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಸಮೀಪದ ಯಾವುದೇ ಸರ್ಕಾರಿ ಪಾಲಿಟೆಕ್ನಿಕ್‍ಗಳ ಪ್ರಾಂಶುಪಾಲರಿಗೆ ಮೇ 15 ರ ಸಂಜೆ 5.30 ರೊಳಗಾಗಿ ಸಲ್ಲಿಸಬೇಕು. ತಾತ್ಕಾಲಿಕ ಮೆರಿಟ್ ಪಟ್ಟಿ ಮೇ 15 ರ ಸಂಜೆ 6 ರ ನಂತರ ಪ್ರಕಟಿಸಲಾಗುತ್ತದೆ. ಮೆರಿಟ್ ಪಟ್ಟಿ ಆಕ್ಷೇಪಣೆ/ತಿದ್ದುಪಡಿ/ಪರಿಷ್ಕರಣೆ ಮಾಡಲು ಮನವಿ ಸಲ್ಲಿಸಲು ಮೇ 16 (ಬೆಳಿಗ್ಗೆ 10.00 ರಿಂದ ಸಂಜೆ 4.00ರ ವರೆಗೆ) ಕೊನೆಯ ದಿನ. ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ ಮೇ 17 (ಸಂಜೆ 5.30ರ ನಂತರ). ಸೀಟು ಹಂಚಿಕೆ ಪ್ರಕಟಣೆ ಮೇ 21 ರಂದು (ಸಂಜೆ 6.00ರ ನಂತರ).
ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಪ್ರಾರಂಭ ಮತ್ತು ಕೊನೆಯ ದಿನ ಮೇ 22 ರಿಂದ 23. ಸೀಟುಗಳು ಭರ್ತಿಯಾಗದೇ ಉಳಿಕೆಯಾಗಿದ್ದಲ್ಲಿ ಪ್ರಾಂಶುಪಾಲರ ಹಂತದಲ್ಲಿಯೇ ಆಫ್‍ಲೈನ್ ಮೂಲಕ ಮೆರಿಟ್ ಮತ್ತು ರೋಸ್ಟರ್‍ಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲು ಪ್ರಾರಂಭ ಮೇ 24 ಮತ್ತು ಕೊನೆಯ ದಿನ ಮೇ 31.
ಮೆರಿಟ್ ಹಾಗೂ ರೋಷ್ಟರ್‍ಗನುಗುಣವಾಗಿ ಆಫ್‍ಲೈನ್ ಪ್ರವೇಶಾತಿ ಪ್ರಕ್ರಿಯೆ (ಪಾಲಿಮರ್ ಕೋರ್ಸ್) ತಾತ್ಕಾಲಿಕ ವೇಳಾಪಟ್ಟಿ:- ಇಲಾಖೆಯ ಅಧಿಕೃತ ವೆಬ್‍ಸೈಟ್‍ಗಳಿಂದ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಪ್ರವೇಶ ಬಯಸುವ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸಲು ಮೇ 9 ಕೊನೆಯ ದಿನ. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ತಯಾರಿಸಿ ಸೂಚನಾ ಫಲಕದಲ್ಲಿ ಮೇ 10 ರಂದು (ಬೆಳಿಗ್ಗೆ 10.30 ರ ನಂತರ) ಪ್ರಕಟಿಸಲಾಗುತ್ತದೆ. ಆಫ್‍ಲೈನ್ ಕೌನ್ಸೆಲಿಂಗ್ ಮುಖಾಂತರ ಸೀಟುಹಂಚಿಕೆ ಮಾಡಿ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು ಮತ್ತು ಪ್ರವೇಶ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಕೊನೆಯ ದಿನ ಮೇ 10 ರ ಅಪರಾಹ್ನ ಮತ್ತು ಮೇ 12 ರಂದು ಸಂಜೆ 5:30 ರವರೆಗೆ.
ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‍ಸೈಟ್ ï
https://dtek.karnataka.gov.in ಅಥವಾ dtetech.karnataka.gov.in/tartechnical ಅಥವಾ ಮಂಗಳೂರು ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಕಛೇರಿ ದೂರವಾಣಿ ಸಂಖ್ಯೆ: 0824-2211636, 3516910 ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
