26 C
Karnataka
Sunday, November 24, 2024

ಅತ್ಯುತ್ತಮ ಯುವ ಸಮುದಾಯ ರೂಪಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ: ಗೋವಿಂದನ್

ಮಂಗಳೂರು: ಯುವಜನತೆಯಲ್ಲಿ ಸೃಜನಾತ್ಮಕತೆಯನ್ನು ಬೆಳೆಸಿದಾಗ ಮಾತ್ರ ರಾಷ್ಟ್ರವನ್ನು ಪರಮ ವೈಭವದಲ್ಲಿ ಕಾಣುವುದಕ್ಕೆ ಸಾಧ್ಯ. ಈ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ. ಆಗ ಮಾತ್ರ ರಾಷ್ಟ್ರದಲ್ಲಿ ವಿಶೇಷ ವ್ಯಕ್ತಿಗಳನ್ನು ರೂಪಿಸಲು ಸಾಧ್ಯ, ಎಂದು ತೆಲಂಗಾಣ ಭಾಗ್ಯನಗರದ ಸಾಮಾಜಿಕ ಕಾರ್ಯಕರ್ತ, ಇಂಜಿನಿಯರಿಂಗ್ ಕಾಲೇಜು ಮಾಜಿ ಪ್ರಾಧ್ಯಾಪಕ ಗೋವಿಂದನ್ ತಿಳಿಸಿದರು.
ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ನಡೆದ ‘ಕಾಯಕ ಸಂಕಲ್ಪ ದಿನಾಚರಣೆಯ ಅಂಗವಾಗಿ ನಡೆದಕಾರ್ಯಕ್ರಮದಲ್ಲಿ ಯುವ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಕುರಿತು ವಿಶೇಷ ಉಪನ್ಯಾಸನೀಡಿದರು. ಭವಿಷ್ಯದ ಅತ್ಯುತ್ತಮ ಯುವ ಸಮುದಾಯವನ್ನು ಸೃಷ್ಟಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹಾಗಾಗಿ ಶಿಕ್ಷಕ ಸಮುದಾಯ ಈಗಲೇ ಸೃಜನಾತ್ಮಕವಾಗಿ ಕಾರ್ಯಪ್ರವೃತ್ತರಾಗಬೇಕು, ಎಂದು ಅವರು ಕರೆಯಿತ್ತರು.
ಕೆ.ಆರ್.ಎಸ್.ಎಸ್.ಎಂ ಮಂಗಳೂರು ವಿವಿ ವಿಭಾಗದ ಅಧ್ಯಕ್ಷೆ ಡಾ. ಸುಧಾ ಎನ್. ವೈದ್ಯ ಮಾತನಾಡಿ, ಸಮಾಜದಲ್ಲಿ ಉತ್ತಮ ಬದಲಾವಣೆಯ ಗಾಳಿ ಶಿಕ್ಷಕರಿಂದಲೇ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸೋಣ, ಎಂದರು.ಅಖಿಲ ಭಾರತೀಯ ಶಿಕ್ಷಕ ಮಹಾಸಂಘದ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಡಾ. ಮಾಧವ ಎಂ. ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಕೆ.ಆರ್.ಎಸ್.ಎಸ್.ಎಂ ಮಂಗಳೂರು ವಿವಿ ವಿಭಾಗದ ಕಾರ್ಯದರ್ಶಿ ವೆಂಕಟೇಶ್ ನಾಯಕ್ಸ್ವಾಗತಿಸಿದರು, ಸದಸ್ಯ ರಾಜೇಶ್ ವಂದಿಸಿದರು. ಕೋಶಾಧಿಕಾರಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಾಲೇಜುಗಳ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles