ಮಂಗಳೂರು:- ಕರಾ.ರ.ಸಾ. ಸಂಸ್ಥೆಯು ಮಂಗಳೂರಿನಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲಾ, ಹುಬ್ಬಳ್ಳಿ, ಬಾಗಲಕೋಟೆ, ನಿಡಗುಂದಿ, ಮುದ್ದೇಬಿಹಾಳ ಮಾರ್ಗವಾಗಿ ತಾಳಿಕೋಟೆಗೆ ಹೊಸ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಸಂಚಾರವನ್ನು ನವೆಂಬರ್ 18 ರಿಂದ ಪ್ರಾರಂಭಿಸಿದೆ.
ಈ ಬಸ್ ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 6.30 ಗಂಟೆಗೆ ಹೊರಟು ಉಡುಪಿ 7.45ಕ್ಕೆ, ಕುಂದಾಪುರ 8.25ಕ್ಕೆ ನಂತರ ಹುಬ್ಬಳ್ಳಿ ಮಾರ್ಗವಾಗಿ ತಾಳಿಕೋಟೆಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಮರು ಪ್ರಯಾಣದಲ್ಲಿ ತಾಳಿಕೋಟೆಯಿಂದ ಸಂಜೆ 5.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ತಲುಪುವುದು. ಮಂಗಳೂರಿನಿಂದ ತಾಳಿಕೋಟೆಗೆ ಬಸ್ ಪ್ರಯಾಣ ದರ ರೂ. 1300 ಆಗಿರುತ್ತದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗೀಯ ನಿಯಂತ್ರಾಣಧಿಕಾರಿಗಳ ಪ್ರಕಟಣೆ ತಿಳಿಸಿದೆ.