18.8 C
Karnataka
Wednesday, December 11, 2024

ಅರುವ ಕೊರಗಪ್ಪ ಶೆಟ್ಟಿಯವರಿಗೆ ‘ ಕುಂಬ್ಳೆ ಸಂಸ್ಮರಣ ಪ್ರಶಸ್ತಿ

ಮಂಗಳೂರು ; ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಟಾನ (ರಿ) ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಕರಣ ವೇದಿಕೆ ಜಂಟಿಯಾಗಿ ಅಯೋಜಿಸುವ ಪ್ರತಿಷ್ಟಿತ ಕಾರ್ಯಕ್ರಮ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 14 ಶನಿವಾ ಸಂಜೆ 5 ರಂದು ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ನಡೆಯಲಿದೆ ಎಂದು ಶಶಿರಾಜ್ ಶೆಟ್ಟಿ ಕಾವೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಬಾವಿಯಿಂದ ಆರಂಭಗೊಂಡ ಈ ಪ್ರಶಸ್ತಿ 2013 ನೇ ಸಾಲಿನಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ನೀಡಲಾಗಿತ್ತು .ಈ ಬಾರಿ ಹಿರಿಯ ಯಕ್ಷಗಾನ ಕಲಾವಿದರೂ ಮತ್ತು ಕುಬ್ಳೇಯವರ ಒಡನಾಡಿಯೂ ಆಗಿದ್ದ ಶೀ ಆರುವ ಗೊರಗಪ್ಪ ಶೆಟ್ಟರಿಗೆ ‘ಕುಂಬ್ಳೆ ಸಂಸ್ಮರಣ ಪ್ರಶಸ್ತಿ – 2024 ‘ ನೀಡಲಾಗುತ್ತದೆ. ಇದರಲ್ಲಿ 25000/- ನಗದು, ಸನ್ಮಾನ ಸ್ಮರಣಿಕೆ ಮುಂತಾದವು ಒಳಗೊಂಡಿದೆ .ಹಿರಿಯ ಯಕ್ಷಗಾನ ಅರ್ಥದಾರಿ ಮತ್ತು ವಿಮರ್ಶಕರಾದ ಭಾಸ್ಕರ ರೈ ಕುಕ್ಕುವಳ್ಳಿಯವರು ಕುಂಬ್ಳೆಯವರ ಸಂಸ್ಮರಣೆ ಮಾಡಲಿದ್ದಾರೆ. ಅಗರಿ ಎಂಟರ್ ಪ್ರೈಸಸ್ ನ ಮಾಲಕರಾದ ಅಗರಿ ರಾಘವೇಂದ್ರ ರಾವ್ ಮತ್ತು ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿಯವರು ಅತಿಥಿಗಳಾಗಿ ಬರಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ನಾ.ದಾಮೋದರ ಶೆಟ್ಟಿಯವರು ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಮೋಕ್ಷ’ ಎಂಬ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಹಿರಿಯ ಯಕ್ಷಗಾನ ಭಾಗವತರಾದ ದೀನೇಶ ಅಮ್ಮಣ್ಣಾಯ ,ಮದ್ದಳೆಯಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ, ಮತ್ತು ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ ಸಹಕರಿಸಲಿದ್ದು ,ಮುಮ್ಮೇಳದಲ್ಲಿ ಡಾ.ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್ ,ವಾಸುದೇವ ರಂಗಾಭಟ್ ,ಮಧೂರು ಅರ್ಥ ಹೇಳಲಿದ್ದಾರೆಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ,ಕರುಣಾಕರ್ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್ ,ಸತ್ಯನಾರಾಯಣ ಕೆ. ಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles