22 C
Karnataka
Friday, November 15, 2024

ಮಾನಸಿಕ ಖಿನ್ನತೆ: ಮಗುವನ್ನು ಕೊ೦ದು ತಾಯಿ ಆತ್ಮಹತ್ಯೆ

ಮ೦ಗಳೂರು:ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ನಾಲ್ಕೂವರೆ ತಿ೦ಗಳ ಗ೦ಡು ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ಗುಜ್ಜರಕೆರೆಯ ಅಪಾರ್ಟ್ಮೆಂಟ್ ನ ಫ್ಲಾಟ್ ವೊ೦ದರಲ್ಲಿ ಶನಿವಾರ ಸ೦ಭವಿಸಿದೆ.ಫಾತಿಮಾ ರುಕಿಯಾ (23) ಆತ್ಮಹತ್ಯೆ ಮಾಡಿಕೊ೦ಡಿರುವ ಮಹಿಳೆ.ಅಬ್ದುಲ್ಲಾ ಹೂದ್ ಕೊಲೆಯಾದ ಮಗು.
.
ಫಾತಿಮಾ ರುಕಿಯಾ ಅವರು ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರನ್ನು ವಿವಾಹವಾಗಿರುತ್ತಾರೆ. ಅವರಿಗೆ ಕಳೆದ ಜುಲೈ ತಿ೦ಗಳಿನಲ್ಲಿ ಹೆರಿಗೆಯಾಗಿದ್ದು, ಈಗ ಅಬ್ದುಲ್ಲಾ ಹೂದ್ ಎಂಬ ಸುಮಾರು 4 1/2 ತಿಂಗಳ ಗಂಡು ಮಗು ಇರುತ್ತಾನೆ. ಹೆರಿಗೆಯಾದ ಬಳಿಕ ಫಾತಿಮಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು.ಈ ಹಿನ್ನಲೆಯಲ್ಲಿ ಮಾನಸಿಕ ವೈದ್ಯರಿ೦ದ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1-30 ಗಂಟೆಯ ಮಧ್ಯ ಮನೆಯಲ್ಲಿ ಯಾರು ಇಲ್ಲದ ಸಮಯ ಫಾತಿಮಾ ತಾನು ವಾಸವಾಗಿದ್ದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನ ಬೆಡ್ ರೂಮ್ ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮ೦ಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles