ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6,053 ಹಿರಿಯ ನಾಗರಿಕರು ಹಾಗೂ 1,957 ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಎಂ.ಪಿ ತಿಳಿಸಿದರು.
ಬಾನುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಭಾರತೀಯ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ 6,053 ಮತದಾರರಿಗೆ ಹಾಗೂ 40% ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿರುವ 1,957 ಮತದಾರರಿಗೆ ಮನೆಮನೆ ಭೇಟಿ ಮಾಡಿ ಅಂಚೆ ಮತಪತದ ಮೂಲಕ ಮತದಾನ ಸೌಲಭ್ಯ ಒದಗಿಸಿದೆ ಎಂದರು.
ಅಂಚೆ ಮತಪತಗಳ ವಿತರಣೆಗಾಗಿ ಈಗಾಗಲೇ ಪೋಲಿಂಗ್ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಈ ತಂಡಗಳು ಕಾರ್ಯನಿವಹಿಸುವ ಬಗ್ಗೆ ನಿಗದಿಪಡಿಸಲಾದ ದಿನಾಂಕ, ಸಮಯದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು ಹಾಗೂ ಅಂಗವೈಕಲ್ಯ ಇರುವ ದಿವ್ಯಾಂಗ ಮತದಾರರು ಸೇರಿ ಒಟ್ಟು 8,010 ಜನ ಅಂಚೆ ಮತಪತ್ರದ ಮೂಲಕ ಮತದಾನದ ಸೌಲಭ್ಯ ಪಡೆಯಲಿದ್ದಾರೆ.ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಏ.15ರಿಂದ 17ರ ವರೆಗೆ ಒಟ್ಟು 975 ಮತದಾರರಿಗೆ ಮತದಾನದ ಸೌಲಭ್ಯ ನೀಡಲು 25 ತಂಡಗಳನ್ನು ರಚಿಸಲಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತದಲ್ಲಿ ಏ.15ರಿಂದ 16ರ ವರೆಗೆ ತನಕ ಒಟ್ಟು 812 ಮತದಾರರಿಗೆ ಮತದಾನ ಸೌಲಭ್ಯ ನೀಡಲು 26 ತಂಡಗಳನ್ನು ರಚಿಸಲಾಗಿದೆ. ಮಂಗಳೂರು ವಿಧಾನಸಭಾ ಕ್ಷೇತದಲ್ಲಿ ಏ.15ರಿಂದ 16ರ ವರೆಗೆ ಒಟ್ಟು 515 ಮತದಾರರಿಗೆ ಮತದಾನ ಸೌಲಭ್ಯ ನೀಡಲು 21 ತಂಡಗಳನ್ನು ರಚಿಸಲಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತದಲ್ಲಿ ಏ.15ರಿಂದ 17ರ ವರೆಗೆ ಒಟ್ಟು 1401 ಮತದಾನದ ಸೌಲಭ್ಯ ನೀಡಲು 28 ತಂಡಗಳನ್ನು ರಚಿಸಲಾಗಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಏ.15ರಿಂದ 16ರ ವರೆಗೆ ಒಟ್ಟು 976 ಮತದಾರರಿಗೆ ಮತದಾನ ಸೌಲಭ್ಯ ನೀಡಲು 26 ತಂಡಗಳನ್ನು ರಚಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಏ.15ರಿಂದ 17ರ ವರೆಗೆ ಒಟ್ಟು 1127 ಮತದಾರರಿಗೆ ಮತದಾನ ಸೌಲಭ್ಯ ನೀಡಲು ಒಟ್ಟು 20 ತಂಡಗಳನ್ನು ರಚಿಸಲಾಗಿದೆ.ಸುಳ್ಯ ವಿಧಾನಸಭಾ ಕ್ಷೇತದಲ್ಲಿ ಏ.15ರಿಂದ 16ರ ವರೆಗೆ ಒಟ್ಟು 1038 ಮತದಾರರಿಗೆ ಮತದಾನದ ಸೌಲಭ್ಯ ನೀಡಲು ಒದ್ದು 23 ತಂಡಗಳನ್ನು ರಚಿಸಲಾಗಿದೆ.
ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಏ.15ರಿಂದ 17ರ ವರೆಗೆ ಒಟ್ಟು 1166 ಮತದಾರರಿಗೆ ಮತದಾನದ ಸೌಲಭ್ಯ ನೀಡಲು ಒಟ್ಟು 22 ತಂಡಗಳನ್ನು ರಚಿಸಲಾಗಿದೆ.ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಅಂಚೆ ಮತಪತ್ರ ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.