ಮ೦ಗಳೂರು:ಭಾರತ ಚುನಾವಣಾ ಆಯೋಗ ಮಾ. 16ರಂದು ಹೊರಡಿಸಿದ ಆದೇಶದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ – 2024 ರ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ
ದಿನಾಂಕ : 26.04.2024 ರ೦ದು ಚುನಾವಣೆ ನಡೆಯಲಿದೆ ಎ೦ದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..
ಮಾದರಿ ನೀತಿ ಸಂಹಿತೆಯು ಈಗಾಗಲೇ ಜ್ಯಾರಿಗೆ ಬಂದಿದ್ದು ಮಾ. 16 ರಿಂದ ಜೂ.6ವರೆಗೆ ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿರುತ್ತದೆ .ಆದ್ದರಿಂದ ಯಾವುದೇ ಸಭೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆ ಇತ್ಯಾದಿ ನಡೆಸಲು ಸಾರ್ವಜನಿಕರು /ರಾಜಕೀಯ ಪಕ್ಷದವರು ಚುನಾವಣಾಧಿಕಾರಿಗಳು / ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ ಎ೦ದರು..
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 877438 ಪುರುಷರು ಹಾಗೂ 919321 ಮಹಿಳಾ ಮತದಾರರು ಸೇರಿದ೦ತೆ ಒಟ್ಟು 17,96,826 ಮತದಾರರಿದ್ದಾರೆ. 18310 ಪುರುಷರು,17376 ಮಹಿಳಾ ಮತದಾರರು ಸೇರಿದ೦ತೆ
35689 ಯುವ ಮತದಾರರಿದ್ದಾರೆ.
ಚುನಾವಣಾ ವೇಳಾಪಟ್ಟಿ:
ಚುನಾವಣೆ ನೋಟೀಸು ಹೊರಡಿಸುವ ದಿನಾಂಕ : 28.03.2024 (ಗುರುವಾರ)
ಚುನಾವಣೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ : 4.04.2024 (ಗುರುವಾರ)
ನಾಮಪತ್ರ ಪರಿಶೀಲನೆಯ ದಿನಾಂಕ : 5.04.2024 (ಶುಕ್ರವಾರ)
ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ : 8.04.2024 (ಸೋಮವಾರ)
ಚುನಾವಣೆ ನಡೆಯುವ ದಿನಾಂಕ : 26.04.2024 (ಶುಕ್ರವಾರ)
ಮತಎಣಿಕೆ ದಿನಾಂಕ : 04.06.2024 (ಮಂಗಳವಾರ)
ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ದಿನಾಂಕ : 6.6.2024 (ಗುರುವಾರ)
ಮತಗಟ್ಟೆ ವಿವರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1876 ಮತಗಟ್ಟೆಗಳಿವೆ.ಬೆಳ್ತಂಗಡಿ- 241.ಮೂಡಬಿದ್ರಿ 219. ಮಂಗಳೂರು ನಗರ ಉತ್ತರ 254. ಮಂಗಳೂರು ನಗರ ದಕ್ಷಿಣ 249.ಮಂಗಳೂರು 210- ಬಂಟ್ವಾಳ 249. ಪುತ್ತೂರು 221.ಸುಳ್ಯ 233 ಮತಗಟ್ಟೆಗಳಿವೆ.
ಚುನಾವಣಾ ಸಂಬಂಧಿತ ಕಂಟ್ರೋಲ್ ರೂಮ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಇದರ ದೂರವಾಣಿ ನಂಬ್ರ: 1950
ಟೋಲ್ ಪ್ರೀ ನಂಬರ್ ಈ ಕಂಟ್ರೋಲ್ ರೂಮ್ ದಿನದ 24 ಗಂಟೆಗಳು ಕಾರ್ಯಚರಣೆ ನಡೆಸುತ್ತಿದ್ದು ಚುನಾವಣೆಗೆಸಂಬಂದಿಸಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಈ ಕಂಟ್ರೋಲ್ ರೂಮ್ ಗೆ
ದೂರು ನೀಡಬಹುದು ಹಾಗೂ ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನುಪಡೆಯಬಹುದು.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ,ಡಾ. ಆನಂದ್ ಕೆ , ಮಂಗಳೂರು ನಗರ ಪೋಲೀಸ್ ಆಯುಕ್ತ ಅನುಪಮ್ ಅಗರ್ ವಾಲ್
,ದಕ್ಷಿಣ ಕನ್ನಡ ಪೋಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಉಪಸ್ಠಿತರಿದ್ದರು.
