ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಪೋರ್ಟ್, ಶಿಪ್ಪಿಂಗ್ ಆಂಡ್ ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್ ನ ಎಂಬಿಎ ವಿಭಾಗಗಳ ಸಂಯುಕ್ತ
ಆಶ್ರಯದಲ್ಲಿ ಮ್ಯಾಗ್ಮ 2025 ಈ ವರ್ಷದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಮತ್ತು ಕಲ್ಚರಲ್ ಫೆಸ್ಟ್‌ನ್ನು ಫೆಬ್ರವರಿ 21 ಮತ್ತು 22, 2025 ರಂದು ಶ್ರೀನಿವಾಸ ವಿಶ್ವವಿದ್ಯಾಲಯ,
ಪಾಂಡೇಶ್ವರ, ಸಿಟಿ ಕ್ಯಾಂಪಸ್‌ನಲ್ಲಿ ಜರುಗಲಿದೆ. ಆಯೋಜಿಸಲಾಗಿದೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್ ಡೀನ್ ಡಾ. ವೆಂಕಟೇಶ್ ಅಮೀನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮ್ಯಾಗ್ಮ 2025 ಅನ್ನು ದೇಶದ 47ಕ್ಕೂ ಹೆಚ್ಚು ತಂಡಗಳು ಪ್ರತಿನಿಧಿಸಲಿದ್ದು, ಅತ್ಯಂತ ಉತ್ಕೃಷ್ಟ ಮತ್ತು ಪ್ರತಿಷ್ಠಿತ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಲಿದೆ. ಈ ಉತ್ಸವವು ವಿದ್ಯಾರ್ಥಿಗಳಿಗೆ ನಾಯಕತ್ವ ಕೌಶಲ್ಯಗಳನ್ನು
ಬೆಳೆಸಲು, ಹೊಸ ಸಂಪರ್ಕಗಳನ್ನು ನಿರ್ಮಿಸಲು ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ ಎ೦ದರು .
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ.,ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.
ಸಿಎ. ಎ. ರಾಘವೇಂದ್ರ ರಾವ್ ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ,ಬೋರ್ಡ್ ಆಫ್ ಗವರ್ನರ್ಸ್ ಟ್ರಸ್ಟಿಗಳಾದ ಎ. ವಿಜಯಲಕ್ಷ್ಮಿ ಆರ್. ರಾವ್,ಪ್ರೊ. ಇಆರ್. ಎ. ಮಿತ್ರಾ ಎಸ್. ರಾವ್ (ಟ್ರಸ್ಟಿ ಸದಸ್ಯರು, ಬೋರ್ಡ್ ಆಫ್ ಗವರ್ನರ್ಸ್, ಶ್ರೀನಿವಾಸ ವಿಶ್ವವಿದ್ಯಾಲಯ) ಉಪಸ್ಥಿತರಿರಲಿದ್ದಾರೆ ಎ೦ದರು.
ಡಾ. ಸೋನಿಯಾನೋರೋನ್ಹಾ (ಡೀನ್, ಇನ್‌ಸ್ಟಿಟ್ಯೂಟ್ ಆಫ್ ಪೋರ್ಟ್, ಶಿಪ್ಪಿಂಗ್ ಆಂಡ್ ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್), ಡಾ.ಕಾವ್ಯಶ್ರೀ, ಪ್ರೊ. ಸಾಗರ್ ಶ್ರೀನಿವಾಸ, ಪ್ರೊ. ಮಿಥುನ್ ರಾಜ್, ಪ್ರೊ. ಪರೇಶ್ ಸಾಲಿಯಾನ್ ಮ್ಯಾಗ್ಮ ಸಂಯೋಜಕರು ಉಪಸ್ಥಿತರಿದ್ದರು.
