26.6 C
Karnataka
Friday, April 4, 2025

ಮಲ್ಪೆ: ಒಂದೇ ಕುಟುಂಬದ ನಾಲ್ವರ ಕೊಲೆ

ಮಲ್ಪೆ: ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ಘಟನೆ ಉಡುಪಿ ಮಲ್ಪೆ ಸಮೀಪದ ನೇಜಾರಿನ ತೃಪ್ತಿ ನಗರದಲ್ಲಿ ರವಿವಾರ ಬೆಳಗ್ಗೆ ನಡೆದಿದೆ
ಹಸೀನಾ(46), ಅಫ್ನಾನ್ (23), ಅಯ್ನಾಝ್ (21), ಆಸೀ೦ (12) ಕೊಲೆಯಾದವರು.ಮನೆಯೊಳಗಿದ್ದ ಮತ್ತೋರ್ವ ವ್ಯಕ್ತಿ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ರೌನ್‌ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದಿದ್ದ ಅಪರಿಚಿತ ವ್ಯಕ್ತಿಯೋವ೯ ಮನೆಗೆ ನುಗ್ಗಿ ಮಹಿಳೆ ಹಾಗೂ ಮಕ್ಕಳಾದ ಹಸಿನಾ, ಅಫ್ನಾನ್, ಅಯ್ನಾಝ್ ಅವರನ್ನು ಇರಿದಿದ್ದು, ಸದ್ದು ಕೇಳಿ ಆಸೀಮ್ ಒಳ ಬರುತ್ತಿದ್ದಂತೆ ಅತನನ್ನು ಕೂಡಾ ಇರಿದು ಕೊಂದಿದ್ದಾನೆ.ಬೊಬ್ಬೆ ಕೇಳಿ ಪಕ್ಕದ ಮನೆ ಯುವತಿ ಹೊರಗಡೆ ಬಂದಿದ್ದು, ಆಕೆಯನ್ನು ಬೆದರಿಸಿ ಸ್ಥಳದಿಂದ ದುಷ್ಕರ್ಮಿ ಪರಾರಿಯಾಗಿದ್ದಾನೆ.


ಹತ್ಯೆ ಪ್ರಕರಣ ಬಗ್ಗೆ ಮಹತ್ವದ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿದೆ.ಹತ್ಯೆ ನಡೆದ ಮನೆಗೆ ದುಷ್ಕರ್ಮಿಯನ್ನು ಡ್ರಾಪ್ ಮಾಡಿರುವ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ನಾನು ಆತ ಹೇಳಿದ ವಿಳಾಸದ ಮನೆಗೆ ಡ್ರಾಪ್ ಮಾಡಿದ್ದೆ.ಆತ ಮುಖಕ್ಕೆ ಮಾಸ್ಕ್ ಧರಿಸಿದ್ದು , ಆತನ ಕೈಯಲ್ಲಿ ಬ್ಯಾಗ್ ಕೂಡ ಇತ್ತು.ನಾನು ಅವನನ್ನು ಇಳಿಸಿದ 15 ನಿಮಿಷಗಳಲ್ಲಿ ಆತ ಮತ್ತೆ ವಾಪಸ್ ಬಂದಿದ್ದ .ಎಂದು ತಿಳಿಸಿದ್ದಾರೆ.
ಕೊಲೆಯಾದ ಅಫ್ನಾನ್ (23) ಬೆ೦ಗಳೂರಿನಲ್ಲಿ ಏರ್‌ ಇ೦ಡಿಯಾದಲ್ಲಿ ಉದ್ಯೋಗಿಯಾಗಿದ್ದು ಶನಿವಾರ ಊರಿಗೆ ಬ೦ದಿದ್ದರು ಎನ್ನಲಾಗಿದೆ.ಮನೆಯ ಯಜಮಾನ ನೂರ್‌ ಮಹಮ್ಮದ್‌ ಸೌದಿ ಆರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles