ಉಪ್ಪಿನಂಗಡಿ : ಮರಕ್ಕೆ ಹತ್ತಿ ಮಾವಿನ ಕಾಯಿ ಕೊಯ್ಯುತ್ತಿರುವ ಸಮಯ ಹಿಡಿತ ತಪ್ಪಿ ಕೆಳಗೆ ಬಿದ್ದು ರಮೇಶ ಎ೦ಬವರು ಮೃತಪಟ್ಟ ಘಟನೆ ನೆಲ್ಯಾಡಿಯಲ್ಲಿ ಸ೦ಭವಿಸಿದೆ. ರಮೇಶ್ ಅವರಲ್ಲಿ 10 ವರ್ಷದ ಮಗಳು ಮಾವಿನ ಕಾಯಿಯನ್ನು ಕೊಯಿದು ಕೊಡುವಂತೆ ಕೋರಿದ್ದಳು. ಅದರ೦ತೆ ರಮೇಶ್ ಪಕ್ಕದಲ್ಲಿದ್ದ ಮಾವಿನ ಮರಕ್ಕೆ ಹತ್ತಿ ಮಾವಿನ ಕಾಯಿಯನ್ನು ದೊಂಟಿಯ ಸಹಾಯದಿಂದ ಬಡಿದು ಕೊಯ್ಯುತ್ತಿರುವ ಸಮಯ ಆಕಸ್ಮಿಕವಾಗಿ ಮಾವಿನ ಮರವನ್ನು ಹಿಡಿದುಕೊಂಡಿರುವ ಕೈಯ ಹಿಡಿತ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡರು. ಕೂಡಲೇ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
