ಮ೦ಗಳೂರು:ಲಾಡ್ಜ್ ಕೊಠಡಿಯೊ೦ದರಲ್ಲಿ ಬೆಂಕಿ ಕಾಣಿಸಿಕೊಂಡು ವಾಸ್ತವ್ಯವಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಗರದ ಬೆಂದೂರ್ ವೆಲ್ ನಲ್ಲಿ ಬುಧವಾರ ರಾತ್ರಿ ಸ೦ಭವಿಸಿದೆ. ಯಶರಾಜ್ ಸುವರ್ಣ(43) ಮೃತಪಟ್ಟವರು.
ಲಾಡ್ಜ್ ನಲ್ಲಿ ರಾತ್ರಿ ಊಟ ಮುಗಿಸಿ ತಮ್ಮ ಕೋಣೆಯಲ್ಲಿ ಒಬ್ಬರೇ ಇದ್ದರು. ಮಧ್ಯರಾತ್ರಿ ಸುಮಾರು 12 ಗಂಟೆಗೆ ಅವರ ಕೊಠಡಿಯ ಬಾಗಿಲಿನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ಲಾಡ್ಜ್ ಸಿಬ್ಬ೦ದಿ ಕೂಡಲೇ ಅಗ್ನಿಶಾಮಕದಳಕ್ಕೆ ಕರೆಮಾಡಿದ್ದು ಅವರು ಸ್ಥಳಕ್ಕೆ ಆಗಮಿಸಿದರು. ಕೊಠಡಿಯ ಬಾಗಿಲನ್ನು ಒಳಗಿನಿ೦ದ ಲಾಕ್ ಮಾಡಲಾಗಿತ್ತು. ಬಾಗಿಲು ತೆರೆದು ಅಗ್ನಿಶಾಮಕ ದಳ ಸಿಬ್ಬ೦ದಿ ಒಳಗೆ ಪ್ರವೇಶಿಸಿದಾಗ ಯಶರಾಜ್ ಸುವರ್ಣ ಅವರ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯಶರಾಜ್ ಸುವರ್ಣ ಮ೦ಗಳೂರು ನಗರದ ಬಿಕನ೯ಕಟ್ಟೆಯ ನಾದ೯ನ್ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದು ನ.೧೫ ರಿ೦ದ ಬೆಂದೂರ್ ವೆಲ್ ನ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.ಅವರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.ಮ೦ಗಳೂರು ಪೂವ೯ ಪೊಲೀಸರು ಪ್ರಕರಣ ದಾಖಲಸಿಕೊ೦ಡು ತನಿಖೆ ನಡೆಸುತ್ತಿದ್ದಾರೆ.