17.9 C
Karnataka
Saturday, November 23, 2024

ಮಂಗಳೂರು ಮಹಾನಗರಪಾಲಿಕೆ:ವಿವಿಧ ಸವಲತ್ತುಗಳ ವಿತರಣೆ

ಮಂಗಳೂರು; ಮಹಾನಗರಪಾಲಿಕೆಯ ಶೇ 24.10, ಶೇ .7.25 ಮತ್ತು ಶೇ .5 ನಿಧಿಯಡಿ ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 16 ಫಲಾನುಭವಿಗಳಿಗೆ ಮೇಯರ್ ಸುಧೀರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ರೂ 10,94,000/- ಮೊತ್ತದ ಚೆಕ್ಕನ್ನು ವಿತರಿಸಲಾಯಿತು.
ಪಾಲಿಕೆಯ ಮೇಯರ್ ರವರ ಕೊಠಡಿಯಲ್ಲಿ ಆಯೋಜಿಸಲಾದ ಈ ಕಾಯ೯ಕ್ರಮದಲ್ಲಿ ಶೇ 24.10 ಯೋಜನೆಯಡಿ ಬರುವ ಪರಿಷಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ದುರಸ್ತಿ, ಮನೆ ನಿಮಾ೯ಣ, ಯು.ಜಿ.ಡಿ. ಸಂಪಕ೯, ಸ್ವಯಂ ಉದ್ಯೋಗ ಮುಂತಾದ ಸವಲತ್ತು ಪಡೆಯಲು ಸಹಾಯಧನ, ಶೇ 7.25 ರ ನಿಧಿಯಡಿ ಹಿಂದುಳಿದ ವಗ೯ದ ಓವ೯ರಿಗೆ ಶಸ್ತ್ರಾ ಚಿಕಿತ್ಸ ವೆಚ್ಚ, ಹಾಗೆಯೆ ಶೇ 5% ರ ನಿಧಿಯಡಿ ಅಂಗವಿಕಲರಿಗೆ ಪಕ್ಕಾ ಮನೆ, ಮನೆ ದುರಸ್ತಿ, ಕ್ರೀಡಾ ಪ್ರೋತ್ಸಾಹ ಧನದ ಚೆಕ್ಕನ್ನು ನೀಡಲಾಯಿತು. ಕಾಯ೯ಕ್ರಮದಲ್ಲಿ ಉಪಮೇಯರ್ ಸುನೀತ, ಮಜಾಿ ಮೇಯರ್ ಜಯಾನಂದ ಅಂಚನ್, ಅಧ್ಯಕ್ಷರಾದ ವರುಣ್ ಚೌಟ, ಗಣೇಶ್ ಕುಲಾಲ್, ಭರತ್ ಕುಮಾರ್, ಸದಸ್ಯರುಗಳಾದ ಸಂದೀಪ್ ಗರೋಡಿ, ಶೋಭ ರಾಜೇಶ್ , ರಂಜಿನಿ ಕೋಟ್ಯಾನ್, ಮನೋಜ್ ಕುಮಾರ್, ನಾಮ ನಿದೇ೯ಶಿತ ಸದಸ್ಯರಾದ ಸತೀಶ್ ಪೆಂಗಾಲ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles