ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳ ಖಾತೆಗಳನ್ನು ಇ-ಆಸ್ತಿ ಆನ್‍ಲೈನ್ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಪ್ರಸ್ತುತ ಆನ್‍ಲೈನ್ ವ್ಯವಸ್ಥೆಯಡಿ ಖಾತಾ ನೋಂದಣಿ, ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವಿಕೆ ಅತ್ಯಂತ ಸರಳ ರೀತಿಯಲ್ಲಿ ನಾಗರಿಕರೇ ಸಲ್ಲಿಸಬಹುದಾಗಿದ್ದು ಮಧ್ಯವರ್ತಿಗಳ ಸಹಾಯ ಪಡೆಯುವ ಅವಶ್ಯಕತೆ ಇರುವುದಿಲ್ಲ.
ಇ-ಆಸ್ತಿ ತಂತ್ರಾಂಶದ ಮೂಲಕ ನಾಗರೀಕರು ಆಸ್ತಿಗಳ ಖಾತೆ ನೊಂದಾವಣೆ, ವರ್ಗಾವಣೆ ಅರ್ಜಿ ಸಲ್ಲಿಸಲು ಮೊದಲಿಗೆ ಏSಖSಂಅ ಇವರಿಂದ ಅಭಿವೃದ್ಧಿಪಡಿಸಿರುವ ಕಿಖ ಅಔಆಇ ಸ್ಕ್ಯಾನ್ ಮಾಡಿದಾಗ ಸಿಗುವ ವೆಬ್‍ಸೈಟ್ ಬಳಸಿಕೊಂಡು ತಮ್ಮ ಮೊಬೈಲ್ ನಂಬ್ರದ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ.
ಭರ್ತಿ ಮಾಡಬೇಕಾದ ವಿವರಗಳು:
ಆಸ್ತಿಯ ವಿವರಗಳು, ಮಾಲಕರ ವಿವರಗಳು (ಭಾವಚಿತ್ರ + ಗುರುತಿನ ಚೀಟಿ ಸಹಿತ), ಕಟ್ಟಡದ ವಿವರಗಳು, ಋಣಗಳ ವಿವರ, ಹಕ್ಕಿನ ವಿವರ, ದಸ್ತಾವೇಜಿನ ವಿವರಗಳು. (ದಸ್ತಾವೇಜಿನ ಮತ್ತು ಇತರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡುವುದು).ಒಂದು ಬಾರಿ ಅಧಿಕಾರಿಗಳಿಂದ ಅನುಮೋದನೆಗೊಂಡಲ್ಲಿ ಅರ್ಜಿದಾರರಿಗೆ ಮೊಬೈಲ್ ಸಂದೇಶ ಬರುವುದು. ಅರ್ಜಿದಾರರು ಇ-ಆಸ್ತಿ ವೆಬ್‍ಸೈಟ್ ಮೂಲಕ, ಮ.ನ.ಪಾ ಕಂದಾಯ ಶಾಖೆಯಿಂದ ಅಥವಾ ಮಂಗಳೂರು-ಒನ್ ಸೇವಾ ಕೇಂದ್ರದಿಂದ ಶುದ್ಧಪ್ರತಿಯನ್ನು ಪಡೆಯಬಹುದು. ಸಾರ್ವಜನಿಕರು ಮಧ್ಯವರ್ತಿಗಳ ಸಹಕಾರವಿಲ್ಲದೇ ಈ ಅವಕಾಶದ ಸದುಪಯೋಗವನ್ನು ಪಡೆಯಬಹುದಾಗಿ ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.