ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ದಿನಾಂಕ 24-05-2024 ರಂದು ಸಾರ್ವಜನಿಕರಿಂದ ದೂರು, ಅಹವಾಲು, ಸಲಹೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಬೆಳಿಗ್ಗೆ 10ಗಂಟೆಯಿಂದ 11 ಗಂಟೆ ಯ ವರೆಗೆ ಫೋನ್ ಇನ್ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡುವ ಸಾರ್ವಜನಿಕರು 0824-2220801 ಅಥವಾ 0824-2220830 ನಂಬ್ರಕ್ಕೆ ಕರೆ ಮಾಡಬಹುದಾಗಿದೆ.
ಅದೇ ದಿನ ಬೆಳಿಗ್ಗೆ 11-15 ರಿಂದ 12-15 ಗಂಟೆ ಯ ವರೆಗೆ ಮಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆಯ ಕುರಿತು ಜನ ಸಂಪರ್ಕ ಸಭೆ ಯನ್ನು ಏರ್ಪಡಿಸಿದ್ದು ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.