24.9 C
Karnataka
Friday, November 15, 2024

ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಮಂಗಳೂರು:2024-25ನೇ ಶೈಕ್ಷಣಿಕ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಆವರಣ/ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಾಲೇಜು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು ಇಲ್ಲಿಯ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪೂರ್ಣಕಾಲಿಕ ಮತ್ತು ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕ ಹೊಂದಿರುವ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳೊಂದಿಗೆ) ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ ನಲ್ಲಿ ನೀಡಲಾದ Linkfaculty.mangaloreuniversity.in ರಲ್ಲಿ ಆಗಸ್ಟ್ 26 ರೊಳಗೆ ಸಲ್ಲಿಸಬೇಕು.

ವಿಭಾಗಗಳು :-
ಕನ್ನಡ, ಜಿಯೋ ಇನ್ಫಮ್ರ್ಯಾಟಿಕ್ಸ್/ಸಾಗರ ಭೂವಿಜ್ಞಾನ, ಇಂಗ್ಲೀμï, ಮೆಟೀರಿಯಲ್ಸ್ ಸೈನ್ಸ್,
ಇತಿಹಾಸ, ಪರಿಸರ ವಿಜ್ಞಾನ, ಅರ್ಥಶಾಸ್ತ್ರ, ಸಸ್ಯಶಾಸ್ತ್ರ, ರಾಜ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಮಾಜಶಾಸ್ತ್ರ. ಅಂಕಿಅಂಶಗಳು, ಸಮಾಜ ಕಾರ್ಯ, ವಾಣಿಜ್ಯ/ಎಂ.ಎಚ್.ಆರ್.ಡಿ.,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಹಿಂದಿ,ಭೂಗೋಳಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಜೈವಿಕ ವಿಜ್ಞಾನ,ಜೈವಿಕ ರಸಾಯನಶಾಸ್ತ್ರ,ವೈದ್ಯಕೀಯ ಭೌತಶಾಸ್ತ್ರ, ಭೌತಶಾಸ್ತ್ರ ರಸಾಯನಶಾಸ್ತ್ರ, ಕೈಗಾರಿಕಾ ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ
ಕಂಪ್ಯೂಟರ್ ಸಯನ್ಸ್ /ಎಂ.ಸಿ.ಎ., ಎಲೆಕ್ಟ್ರಾನಿಕ್ಸ್, ಸೈಬರ್ ಭದ್ರತೆ, ಆಹಾರ ವಿಜ್ಞಾನ ಮತ್ತು ಪೆÇೀಷಣೆ, ಜೈವಿಕ ತಂತ್ರಜ್ಞಾನ, ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ/ ಯೋಗ ವಿಜ್ಞಾನದಲ್ಲಿ ಪಿಜಿ ಡಿಪೆÇ್ಲಮಾ ಕೋರ್ಸ್, M.B.A.(ಪ್ರವಾಸೋದ್ಯಮ), ಎಂ.ಬಿ.ಎ. (IB), ಇತಿಹಾಸ ಮತ್ತು ಪುರಾತತ್ವ, ಕೊಂಕಣಿ,ತುಳು, ಒM.P.Ed.+B.P.Ed
ಎಂ.ಎಡ್.

ಸಲ್ಲಿಸಬೇಕಾದ ದಾಖಲೆಗಳು ;
ಎಸ್.ಎಸ್.ಎಲ್.ಸಿ. ಅಂಕಪಟ್ಟಿ. ಸ್ನಾತಕ ಮತ್ತು ಸ್ನಾತಕೋತ್ತರ ಅಂಕಪಟ್ಟಿಗಳು ಹಾಗೂ ಪದವಿಅಂಕಪಟ್ಟಿ, ಪ್ರಮಾಣಪತ್ರಗಳು, ಸಂಶೋಧನಾ ಪತ್ರಿಕೆಗಳು (SCOPUS/WOS/UGC-CARELIST). . ಸಂದರ್ಶನ ಸಮಯದಲ್ಲಿ ಪ್ರಮಾಣ ಪತ್ರಗಳು. ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು:
ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಯುಜಿಸಿ ನಿಗದಿಪಡಿಸಿದ ಮಾನದಂಡ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ಆದೇಶದನುಸಾರ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಈ ಕುರಿತು ವಿಶ್ವವಿದ್ಯಾನಿಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.

ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ಶುಲ್ಕ ರೂ. 250/- ಹಾಗೂÆ( SC/ST/Cat-1 ಅಭ್ಯರ್ಥಿಗಳಿಗೆ ರೂ.125/)ನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್
www.mangaloreuniversity.ac.in £ ನಲ್ಲಿರುವ ಆನ್‍ಲೈನ್ ಪಾವತಿ ಮೂಲಕ “005/60-Guest Faculty Application fee” ಎಂಬ ಲೆಕ್ಕಶೀರ್ಷಿಕೆಗೆ link ಮುಖಾಂತರ ಪಾವತಿಸಿ ಇ-ರಿಸಿಪ್ಟ್ ಅನ್ನು ಅರ್ಜಿಯೊಂದಿಗೆ ತಪ್ಪದೇ ಅಪ್ಲೋಡ್ ಮಾಡಬೇಕು.

ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.mangaloreuniversity.ac.in £ ನಲ್ಲಿ ಪ್ರಕಟಿಸಲಾಗುವುದು. ನಿಗದಿತ ಶುಲ್ಕ ಪಾವತಿಸದ ಹಾಗೂ ಅಪೂರ್ಣ ದಾಖಲೆಗಳನ್ನು ಅಪ್ಲೋಡ್ ಮಾಡಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅವಶ್ಯಕತೆ ಇದ್ದಲ್ಲಿ ಮಾತ್ರ ಅಗತ್ಯವಿರುವ ಸಂಖ್ಯೆಯ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ವಿಶ್ವವಿದ್ಯಾನಿಲಯ ಕಾಯ್ದಿರಿಸಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles