ಮ೦ಗಳೂರು: ಮಂಜಲಕಟ್ಟೆ ಫ್ರೆಂಡ್ಸ್ ಸರ್ಕಲ್ ಇದರ 35ನೇ ವರ್ಷದ ಸಂಭ್ರಮಾಚರಣೆ ಜ.೩೧ ರಂದು ಕಾವೂರಿನ ಮಂಜಲಕಟ್ಟೆಯಲ್ಲಿ ನಡೆಯಲಿದೆ.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅವರ ಉಪಸ್ಥಿತಿಯಲ್ಲಿ ಮಂಜಲಕಟ್ಟೆಯ ಅಶ್ವತ್ಥ ಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ. ಸಂಜೆ 6ಗಂಟೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ನಡೆಯಲಿದೆ.
ಸಂಜೆ 7ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೆಪ್ಪುಣಿಗುತ್ತು ಗಿರಿಜಾತೆ ಆರ್. ಭಂಡಾರಿ, ಶಾಸಕ ಡಾ| ವೈ. ಭರತ್ ಶೆಟ್ಟಿ, ಮನಪಾ ಸದಸ್ಯೆ ಗಾಯತ್ರಿ ಎ. ರಾವ್, ಮಾಜಿ ಮನಪಾ ಸದಸ್ಯ ದೀಪಕ್ ಕೆ. ಪೂಜಾರಿ, ಶ್ರೀ ಕ್ಷೇತ್ರದ ಬಂಟ ದೈವದ ಪಾತ್ರಿ ದಿನೇಶ್ ಪೂಜಾರಿ ಕಂಪ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
