ಮಂಗಳೂರು: ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ 67 ರಸ್ತೆಯು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಇಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಹಲವಾರು ಘನವಾಹನಗಳು ಲಘುವಾಹನಗಳು ಹಳೇ ಸೇತುವೆ ಮೂಲಕ ಚಲಿಸುತ್ತಿರುವುದರಿಂದ ಸದ್ರಿ ಸೇತುವೆಯ ಎರಡನೇ ಪಿಯರ್ನ ತಳಪಾಯವನ್ನು ಭದ್ರಪಡಿಸಿ ಸಂಪೂರ್ಣ ಸೇತುವೆ ದುರಸ್ತಿ ಪಡಿಸುವವರೆಗೆ ಮರವೂರು ಹಳೆಸೇತುವೆಯಲ್ಲಿ ವಾಹನ ಸಂಚಾರವನ್ನು ನಿಬ೯೦ಧಿಸಿ ಹಳೆ ಸೇತುವೆಯಲ್ಲಿ ಸಂಚರಿಸುವ ವಾಹನಗಳು ಹೊಸ ಸೇತುವೆಯಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶ ಹೊರಡಿಸಿದ್ದಾರೆ.