ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಸಾರ್ವಜನಿಕರೊಂದಿಗೆ ಜನವರಿ 29ರಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲಿರುವರು.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ದೂರವಾಣಿ ಸಂಖ್ಯೆ: 0824-2220301 ಅಥವಾ 0824-2220318 ಕರೆ ಮಾಡಿ ತಿಳಿಸಬಹುದು ಎಂದು ಮಹಾನಗರಪಾಲಿಕೆ ಪರಿಷತ್ತು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.