22.4 C
Karnataka
Sunday, November 17, 2024

ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಐವನ್ ಡಿಸೋಜಾ, ಸ್ಟ್ಯಾನಿ ಅಲ್ವಾರಿಸ್ ,ಉಮರ್ ಯುಎಚ್ ಅವರಿಗೆ ಸನ್ಮಾನ

ಮ೦ಗಳೂರು: ನೂತನವಾಗಿ ನೇಮಕಗೊಂಡ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ಅವರನ್ನು ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್ ವತಿಯಿಂದ ಸನ್ಮಾನಿಸುವ ಸಮಾರಂಭ ಮಂಗಳೂರಿನ ಯೆಯ್ಯಾಡಿಯ ಮಧುವನ್ ವಿಲೇಜ್ ಪಾರ್ಟಿ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಎಂ.ಸಿ.ಸಿ. ಬ್ಯಾಂಕ್ ‌ ಅಧ್ಯಕ್ಷ ಅನಿಲ್ ಲೋಬೊ ಅವರು ಸ್ವಾಗತಿಸಿ ಎಂ.ಸಿ.ಸಿ. ಬ್ಯಾಂಕ್ ಸಮಾಜದ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ .ಕಳೆದ 6 ವರ್ಷಗಳಿಂದ ಸಮಾಜದ ಒಳಿತಿಗಾಗಿ ಬ್ಯಾಂಕ್ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎ೦ದರು. ಎಂ.ಸಿ.ಸಿ. ಬ್ಯಾಂಕ್‌ಗಾಗಿ ತಮ್ಮ ಭವಿಷ್ಯದ ಯೋಜನೆಗಳನ್ನು ಅವರು ಪ್ರಸ್ತುತಪಡಿಸಿದರು.
ಮಾಜಿ ಶಾಸಕ ಹಾಗೂ ಎಂ.ಸಿ.ಸಿ. ಬ್ಯಾಂಕ್ ಗ್ರಾಹಕರಾದ ಜೆ.ಆರ್. ಲೋಬೊ ಅವರು ಅಭಿನಂದನಾ ಭಾಷಣದಲ್ಲಿ ಸನ್ಮಾನಿತರೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಅವರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ಅವರನ್ನು ಸಭೆಗೆ ಪರಿಚಯಿಸಿದರು. ಉಮರ್ ಯು.ಹೆಚ್‘ರವರನ್ನು ಬ್ಯಾಂಕ್ ವತಿಯಿಂದ ಪುಷ್ಪಗುಚ್ಛ, ಶಾಲು, ಮೈಸೂರು ಪೇಟಾ, ಸ್ಮರಣಿಕೆ ಮತ್ತು ಹಣ್ಣುಗಳನ್ನು ನೀಡಿ ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕ ಆಂಡ್ರ್ಯೂ ಡಿಸೋಜ ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಅವರನ್ನು ಪರಿಚಯಿಸಿದರು. ಸ್ಟ್ಯಾನಿ ಅಲ್ವಾರಿಸ್ ಅವರನ್ನು ಬ್ಯಾಂಕ್ ವತಿಯಿಂದ ಪುಷ್ಪಗುಚ್ಛ, ಶಾಲು ಹೊದಿಸಿ, ಮೈಸೂರು ಪೇಟಾ, ಸ್ಮರಣಿಕೆ ಮತ್ತು ಹಣ್ಣುಗಳನ್ನು ನೀಡಿ ಗೌರವಿಸಲಾಯಿತು.
ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜರವರನ್ನು, ನಿರ್ದೇಶಕಿ ಐರಿನ್ ರೆಬೆಲ್ಲೊರವರು ಸಭೆಗೆ ಪರಿಚಯಿಸಿದರು. ಐವನ್ ಡಿಸೋಜಾ ಅವರನ್ನು ಬ್ಯಾಂಕ್ ವತಿಯಿಂದ ಪುಷ್ಪಗುಚ್ಛ, ಶಾಲು, ಮೈಸೂರು ಪೇಟಾ, ಸ್ಮರಣಿಕೆ ಮತ್ತು ಹಣ್ಣುಹಂಪಲು ನೀಡಿ ಅಭಿನಂದಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಡೇವಿಡ್ ಡಿಸೋಜಾ ವಂದಿಸಿದರು. ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಅನಿಲ್ ಪತ್ರಾವೊ, ಎಲ್ರಾಯ್ ಕಿರಣ್ ಕ್ರಾಸ್ಟೊ, ಜೆ.ಪಿ. ರೊಡ್ರಿಗಸ್, ರೋಶನ್ ಡಿಸೋಜಾ, ಫ್ರೀಡಾ, ಮೆಲ್ವಿನ್ ವಾಸ್, ಹೆರಾಲ್ಡ್ ಮೊಂತೇರೊ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್, ಉಪ ಪ್ರಧಾನ ವ್ಯವಸ್ಥಾಪಕರು, ರಾಜ್ ಮಿನೇಜಸ್, ವಿಷನ್-ಮಿಷನ್ ಸಮಿತಿಯ ಸದಸ್ಯರು, ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು. .

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles