18.8 C
Karnataka
Monday, November 25, 2024

ಬೆಳ್ತಂಗಡಿ: ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆ ಉದ್ಘಾಟನೆ

ಮ೦ಗಳೂರು: ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆಯು ಬೆಳ್ತಂಗಡಿಯ ಚರ್ಚ್ ರಸ್ತೆಯ ಬಳಿಯ ವೈಬವ್ ಅರ್ಕೆಡ್‌ನ ನೆಲಮಹಡಿಯಲ್ಲಿ ನ. 24 ರಂದು ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್
ಲೋಬೊ ಉದ್ಘಾಟಿಸಿದರು. ಶಾಖೆಯನ್ನು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ನ ಧರ್ಮಗುರು ಅತೀ ವಂ. ಫಾ ವಾಲ್ಟರ್ ಡಿಮೆಲ್ಲೊ ಆಶೀವರ್ಚಿಸಿದರು.
ಭದ್ರತಾ ಕೊಠಡಿಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್ ಅತೀ ವಂ. ಅಬ್ರಹಾಂ ಪಟ್ಟೆರಿಲ್ , ಇ- ಸ್ಟಾಂಪಿಂಗ್ ವ್ಯವಸ್ಥೆಯನ್ನು ಬೆಳ್ತಂಗಡಿ ಕಥೋಲಿಕ್ ಕ್ರೇಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಹೆನ್ರಿ ಲೋಬೊ ಉದ್ಘಾಟಿಸಿದರು. ಸಿರಿಯನ್ ವಿವಿದ್ದೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಅಧ್ಯಕ್ಷರಾದ ಅನಿಲ್ ಎ.ಜೆ. ಉಪಸ್ಥಿತರಿದ್ದರು.
.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ರತ್ನ ಅನಿಲ್ ಲೋಬೊ ಅವರು. ಬೆಳ್ತಂಗಡಿ ಪರಿಸರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ಮಾಡಿದ ಸಂದರ್ಭದಲ್ಲಿ ಬೆಳ್ತಂಗಡಿ ಪರಿಸರದ ಜನರು ನೀಡಿದ ಸಹಕಾರ ಮತ್ತು ಬೆಂಬಲಕ್ಕಾಗಿ ವಂದನೆಗಳನ್ನು
ಸಲ್ಲಿಸಿದರು. ಶಾಖೆಯು ಪ್ರಾರಂಭವಾದ ಒಂದು ವರ್ಷದೊಳಗೆ ಲಾಭ ಗಳಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಹಕಾರ ಮತ್ತು ಬೆಂಬಲವನ್ನು ಕೋರಿದರು. ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆಗಳನ್ನು ಎಂ.ಸಿ.ಸಿ. ಬ್ಯಾಂಕ್ ಒದಗಿಸುತ್ತದೆ. ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದರಿಂದ ಬ್ಯಾಂಕಿನ ಠೇವಣಿಗಳಿಗೆ ವಿಮಾ ಸೌಲಭ್ಯವಿದೆ ಎಂದು ಹೇಳಿದರು.
ಸಮಾಜ ಸೇವೆಗಾಗಿ ಚಾರ್ಮಾಡಿ ಹಸನಬ್ಬ, ಕೃಷಿ ಮತ್ತು ತೋಟಗಾರಿಕೆಯಲ್ಲಿ ನವೀನ ಯೋಜನೆಗಳನ್ನು ಅನುಷ್ಟಾನಗೊಳಿಸಿದ ಮತ್ತು ಶಿಕ್ಷಣಕ್ಷೇತ್ರದಲ್ಲಿನ ಕೊಡುಗೆಗಾಗಿ ಕಾಸ್ಮಿರ್ ಮಿನೇಜಸ್, ಸಾಮಾನ್ಯ ಜನರಿಗೆ ವೈದಕೀಯ ಸೇವೆಗಳನ್ನು ಒದಗಿಸುವ ಜನರ ವೈದ್ಯರಾಗಿರುವ ಗುರುವಾಯನ್‌ಕೆರೆಯ ಡಾ. ವೇಣುಗೋಪಾಲ್ ಶರ್ಮ ಮತ್ತು ದೈಹಿಕ ಅಸಾಮಥ್ಯ೯ದ ಹೊರತಾಗಿಯೂ ಶೈಕ್ಷಣಿಕ ಉತ್ಕ್ರಷ್ಟತೆಯನ್ನು ಸಾಧಿಸಿದ ಕು ಸಬಿತಾ ಮೋನಿಸ್ ಅವರನ್ನು ಅವರ ಸೇವೆ ಮತ್ತು ಸಾಧನೆಗಾಗಿ ಬ್ಯಾಕಿನಿಂದ ಗುರುತಿಸಿ ಸನ್ಮಾನಿಸಲಾಯಿತು.
ಕಟ್ಟಡ ಮ್ಹಾಲಿಕರಾದ ಸೀತರಾಮ ಶೆಟ್ಟಿ ಮತ್ತು ಇಂಜೀನಿಯರ್ ಕಾರ್ತಿಕ್ ಕಿರಣ್ ಅವರನ್ನು ಸನ್ಮಾನಿಸಲಾಯಿತು. ಶಾಖೆಯಲ್ಲಿ ಮೊದಲ ಖಾತೆಯನ್ನು ತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು. ಮೊದಲ ಖಾತೆ ತೆರೆದ ಸವಿತಾ ಬ್ಯಾಪ್ಟಿಸ್ಟ್‌ ಅವರ ಜನ್ನ ದಿನಾಚರಣೆಯನ್ನು ಈ ಸಂದರ್ಭದಲ್ಲಿ ಆಚರಿಸಲಾಯಿತು.
ಉಪಾಧ್ಯಕ್ಷ ಜೆರಾಲ್ಡ್‌ ಡಿಸಿಲ್ವಾ, ನಿರ್ದೆಶಕರಾದ ಡೆವಿಡ್ ಡಿಸೋಜ,ಅನಿಲ್ ಪತ್ರಾವೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಡಾಫ್ರೀಡಾ ಡಿಸೋಜ, ಐರಿನ್ ರೆಬೆಲ್ಲೊ, ಡಾ ಜೆರಾಲ್ಡ್‌ ಪಿಂಟೊ, ಎಲ್‌ರೊಯ್ ಕಿರಣ್ ಕ್ರಾಸ್ತೊ, ಜೆ.ಪಿ. ರೊಡ್ರಿಗಸ್, ಸಿ.ಜಿ.ಪಿಂಟೊ,ಸುಶಾಂತ್ ಸಲ್ಡಾನ್ಹಾ, ಆಲ್ವಿನ್ ಪಿ. ಮೊಂತೇರೊ,ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು. ನಿರ್ದೇಶಕ ವಿನ್ಸೆಂಟ್ ಲಸ್ರಾದೊ ಸ್ವಾಗತಿಸಿ ಶಾಖಾ ವ್ಯವಸ್ಥಾಪಕ ಶಾರುನ್ ಪಿಂಟೊ ವಂದಿಸಿದರು. ಅವಿಲ್ ಮೋರಾಸ್ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles