ಮ೦ಗಳೂರು: ಎಂ.ಸಿ.ಸಿ. ಬ್ಯಾಂಕಿನಲ್ಲಿ 78ನೇ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಿಲಾಗ್ರಿಸ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಬೊನವೆಂಚರ್ ನಜರೆತ್ ಅವರು ಪವಿತ್ರ ಬಲಿ ಪೂಜೆ ನೆರೆವೇರಿಸಿದರು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಜೆರಾಲ್ಜೂ ಡ್ ಡಿಸಿಲ್ವಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು.
ಬ್ಯಾಂಕಿನ ಭದ್ರತಾ ಸಿಬ್ಬಂದಿಯಾಗಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿ ಆಕಾಲಿಕವಾಗಿ ನಿಧನರಾದ ದಿವಂಗತ ಗೋಪಾಲಕೃಷ್ಣ
ಗಟ್ಟಿಯವರಿಗೆ ಶೃದ್ದಾಂಜಲಿಯನ್ನು ಸಮರ್ಪಿಸಲಾಯಿತು. ಬ್ಯಾಂಕಿನ ವತಿಯಿಂದ ರೂ.25,000/- ಆರ್ಥಿಕ ನೆರವನ್ನು ಅವರ ಕುಟುಂಬಸ್ಥರಿಗೆನೀಡಲಾಯಿತು.
ನಿರ್ದೇಶಕರಾದ ಡಾ ಜೆರಾಲ್ಡ್ ಪಿಂಟೊ, ಆ್ಯಂಡ್ರು ಡಿಸೋಜ, ಅನಿಲ್ಪ ತ್ರಾವೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಐರಿನ್
ರೆಬೆಲ್ಲೊ, ಡೇವಿಡ್ ಡಿಸೋಜ, ಜೆ.ಪಿ. ರೊಡ್ರಿಗಸ್, ಸುಶಾಂತ್ ಸಿ. ಎ. ಸಲ್ಡಾನ್ಹಾ ಮತ್ತು ಕ್ಲೆಮೆಂಟ್ ಜಿ. ಪಿಂಟೊ, ಆಲ್ವಿನ್ ಪ್ರಶಾಂತ್
ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಹೆರಾಲ್ಡ್ ಮೊಂತೇರೊ, ಮೆಲ್ವಿನ್ವಾ ಸ್, ವಿನ್ಸೆಂಟ್ ಲಸ್ರಾದೊ, ಉಪ ಮಹಾಪ್ರಬಂಧಕ ರಾಜ್ ಎಫ್ ಮಿನೇಜಸ್ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ನಿರೂಪಿಸಿದರು.