22.7 C
Karnataka
Thursday, May 22, 2025

ಎಂ.ಸಿ. ಸಿ. ಬ್ಯಾಂಕಿನ 113ನೇ ಸ್ಥಾಪಕರ ದಿನಾಚರಣೆ

ಮ೦ಗಳೂರು: ಎಂಸಿ.ಸಿ.ಬ್ಯಾ೦ಕಿನ 113ನೇ ಸಂಸ್ಥಾಪಕರ ದಿನಾಚರಣೆಯನ್ನು ಮೇ10ರ೦ದು ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಕಛೇರಿಯ ಅವರಣದಲ್ಲಿ ಆಚರಿಸಲಾಯಿತು. ಈ ಆಚರಣೆಯು ಬ್ಯಾಂಕಿನ ಸಂಸ್ಥಾಪಕ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಅವರ ಪರಂಪರೆಗೆ ಗೌರವ ಸಲ್ಲಿಸಿ ಸಹಕಾರಿ ವಲಯದಲ್ಲಿ ಬ್ಯಾಂಕಿನ ನಿರಂತರ ಪ್ರಗತಿಯನ್ನು ಗುರುತಿಸಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬ್ಯಾಂಕಿನ ಇತಿಹಾಸ ಮತ್ತು ಪ್ರಗತಿಯ ಕುರಿತಾದ ಸಾಕ್ಷಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.

ಬ್ಯಾ೦ಕಿನ ಅಧ್ಯಕ್ಷಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ವಂ. ಫಾ| ಡೆನಿಸ್ ಡೆಸಾ, ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತಿಯ ಸುಪಿರೀಯರ್ ವಂ. ಸಿ| ಕ್ಲಾರ ಮಿನೇಜಸ್, ಯುಎಫ್‌ಸಿ, ಪ್ರಜ್ಞ ಕೌನ್ಸೆಲಿಂಗ್ಸೆ೦ಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಂಗಳೂರು ಕೊOಕಣ್ಸ್ ದುಬಾಯ್, ಅಧ್ಯಕ್ಷ ಸ್ಟೇಫನ್ ಮಿನೇಜಸ್ ಮತ್ತು ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.
ಅನಿಲ್ ಲೋಬೊ ಅವರು, ಗಣ್ಯರು, ಆಡಳಿತ ಮಂಡಳಿ ಸದಸ್ಯರು. ಸಿಬ್ಬಂದಿ ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಎಂ.ಸಿ.ಸಿ. ಬ್ಯಾಂಕಿನ ರೂಪಾಂತರ, ಸೇವೆ ಮತ್ತು ಕಾರ್ಯಕ್ಷಮತೆಯನ್ನು ವಿವರಿಸಿದರು.ವಂ. ಫಾ| ಡೆನಿಸ್
ಡೆಸಾ ಅವರ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವಂ.ಫಾ| ಡೆನಿಸ್ ಡೆಸಾ ಮಾತನಾಡಿ ಪ್ರಗತಿಯತ್ತ ಮುನ್ನುಗ್ಗುತ್ತಿರುವ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ
ಸದಸ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಹೊಸದಾಗಿ ಸಿಎ ಪರೀಕ್ಷೇಯಲ್ಲಿ ಉತ್ತೀರ್ಣರಾದ ಗ್ರಾಹಕರ ಮಕ್ಕಳಾದ ಚಾರ್ಟರ್ಡ್ ಅಕೌಂಟೆAಟ್‌ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂತ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಡಾ| ಎಡ್ಮಂಡ್ ಜೆ.ಬಿ. ಫ್ರಾಂಕ್ ಮತ್ತು ಎಂ.ಸಿ.ಸಿ. ಬ್ಯಾ೦ಕಿನ ಮಾಜಿ ನಿರ್ದೇಶಕರು ಮತ್ತು ಬರಹಗಾರ ಮಾರ್ಸೆಲ್ ಎಂ.
ಡಿಸೋಜ, ಮಂಗಳೂರು ಕೊಂಕಣ್ಸ್ ದುಬೈನ ಹೊಸದಾಗಿ ಆಯ್ಕೆಯಾದ ಸ್ಟೀಫನ್ ಮಿನೇಜಸ್ ಇವರು ಸಮುದಾಯಕ್ಕೆ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು. ಸಿಎ ಲಯ್ನಾಲ್ ನೋರೊನ್ಹಾರವರು ಬ್ಯಾಂಕಿನ ಇತಿಹಾಸ, ಪ್ರಗತಿಯನ್ನು ವಿವರಿಸಿ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ ಅಭಿನಂದಿಸಿದರು.ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಪ್ರಜ್ಞ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಅಂಡ್ರೂ ಡಿಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಐರಿನ್
ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ. ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್ ಮತ್ತು ಆಲ್ವಿನ್ ಪಿ. ಮೊಂತೇರೊ ಉಪಸ್ಥಿತರಿದ್ದರು. ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿ, ಗ್ರೀಶ್ಮಾ
ಸಲ್ಡಾನ್ಹಾ, ನೀರ್‌ಮಾರ್ಗ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles