ಮ೦ಗಳೂರು: ಎಂಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಬ್ಯಾಂಕಿನ ಮಹಿಳಾ ಸಿಬಂದಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಸಮಾರಂಭದಲ್ಲಿ ವೈಟ್ ಡೌವ್ಸ್ ಸಂಸ್ಥೆಯ ಸಂಸ್ಥಾಪಕಿ ಕೋರಿನ್ ರಸ್ಕಿನ್ಹಾ ಮುಖ್ಯ ಅತಿಥಿಯಾಗಿದ್ದರು. ಬ್ಯಾಂಕಿನ ನಿರ್ದೇಶಕಿಯರಾದ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಪ್ಲಾವಿಯ ಡಿಸೋಜ, ಶರ್ಮಿಳಾ ಮಿನೇಜಸ್, ಬ್ಯಾಂಕಿನ ಶಾಖಾ ಪ್ರಬಂಧಕರಾದ ಬ್ಲಾಂಚ್ ಫೆರ್ನಾಂಡಿಸ್, ಸುನಿತಾ ಡಿಸೊಜ, ಐಡಾ ಪಿಂಟೊ, ಐರಿನ್ ಡಿಸೋಜ, ಜೆಸಿಂತಾ ಫೆರ್ನಾಂಡಿಸ್ ವಿಲ್ಮಾ ಜ್ಯೋತಿ ಸಿಕ್ವೇರಾ ಮತ್ತು ಅನಿತಾ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಜನರಲ್ ಮೆನೆಜರ್ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಕುಟುಂಬದ ಮತ್ತು ಸಮಾಜದ ಶ್ರೇಯೋಭಿವೃದ್ದಿಗೆ ಮಹಿಳೆಯರು ವಹಿಸುವ ಪಾತ್ರದ ಬಗ್ಗೆ ವಿವರಿಸಿದರು.

ಮಹಿಳಾ ಸಿಬ್ಬಂದಿಯ ಪರವಾಗಿ ಸುರತ್ಕಲ್ ಶಾಖಾ ಪ್ರಬಂಧಕಿ ಸುನಿತಾ ಡಿಸೋಜರವರು ಮಾತನಾಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಕ್ಕಾಗಿ ಮಹಿಳಾ ಸಿಬ್ಬಂದಿಯ ಪರವಾಗಿ ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳಾ ಸಿಬ್ಬಂದಿಯವರಿಗೆ ಬ್ಯಾಂಕಿನ ಅಧ್ಯಕ್ಷ ಬ್ಯಾಂಕಿನ ಅಧ್ಯಕ್ಷರಾದ “ಸಹಕಾರ ರತ್ನ” ಅನಿಲ್ ಲೋಬೊರವರು ಹೂಗೂಚ್ಛ ನೀಡಿ ಶುಭಾಶಯವನ್ನು ಕೋರಿದರು
ಬ್ಯಾಂಕಿನಲ್ಲಿ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆ ಸಲ್ಲಿಸಿದ ಕಾರ್ಕಳ ಶಾಖಾ ಪ್ರಬಂಧಕ ರಾಯನ್ ಪ್ರವೀಣ್ ಇವರನ್ನು ಸನ್ಮಾನಿಸಲಾಯಿತು.ನಿರ್ದೇಶಕರಾದ ಅಂಡ್ರೂ ಡಿಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಸಿ.ಜಿ. ಪಿಂಟೊ, ಅನಿಲ್ ಪತ್ರಾವೊಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಫೆಲಿಕ್ಸ್ ಡಿಕ್ರುಜ್, ಸುಶಾಂತ್ ಸಲ್ಡಾನ್ಹಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು..
ಮನೋಜ್ ಫೆರ್ನಾಂಡಿಸ್ ನಿರೂಪಿಸಿ, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ವಂದಿಸಿದರು. ಸಭಾ ಕಾರ್ಯದ ನಂತರ ಸಿಲ್ವರ್ ಟೋನ್ ಕಾರ್ಕಳ ತಂಡದಿಂದ ಸಂಗೀತ ಕಾರ್ಯಕ್ರಮ, ವಿಸ್ಮಯ ತಂಡದಿಂದ ಹಾಸ್ಯಲಹರಿ ಮತ್ತು ಎಂ.ಸಿ.ಸಿ ಬ್ಯಾಂಕಿನ ಪುರುಷ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
