22.4 C
Karnataka
Sunday, November 17, 2024

ಪಾಲಿಕೆ ವ್ಯಾಪ್ತಿಯೊಳಗೆ ಭೂ ಅಗೆತ ನಿಷೇಧ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ ವರೆಗೆ ತಿಂಗಳೊಳಗೆ ಭೂ ಅಗೆತ ನಿಷೇಧಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅತ್ಯಧಿಕ ಮಳೆ ಆಗುವ ಸಾಧ್ಯತೆ ಇರುವುದರಿಂದ ಕಟ್ಟಡಗಳ ಮೂಲಕ ಯಾವುದೇ ರೀತಿಯ ದುರಂತ ಅಥವಾ ಪ್ರಾಣಪಾಯ ಸಂಭವಿಸಿದಲ್ಲಿ ಕಟ್ಟಡದ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಶಿಥಿಲಗೊಂಡು ಬೀಳುವ ಸಾಧ್ಯತೆ ಇರುವ ಯಾವುದೇ ಕಟ್ಟಡಗಳನ್ನು ಅಥವಾ ಕಟ್ಟಡದ ಭಾಗಗಳನ್ನು ಸೂಕ್ತ ಮುಂಜಾಗ್ರತಾ ಕ್ರಮವಹಿಸಿ ಅಕ್ಕಪಕ್ಕದ ಆಸ್ತಿಗಳಿಗೆ ಹಾನಿಯಾಗದಂತೆ ತೆರವುಗೊಳಿಸಬೇಕು. ಜೂನ್ 1 ರಿಂದ ಸೆಪ್ಟೆಂಬರ್ ತಿಂಗಳೊಳಗೆ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಭಿವೃದ್ಧಿ ಸಂಬಂಧ ನೆಲವನ್ನು ಅಗೆಯಬಾರದು ಹಾಗೂ ಮಳೆಗಾಲ ಮುಗಿದ ನಂತರ ಕಾಮಗಾರಿಯನ್ನು ಪ್ರಾರಂಭಿಸಬೇಕು. ಗುಡ್ಡವನ್ನು ಅಗೆದು ಜಮೀನನ್ನು ಸಮತಟ್ಟುಗೊಳಿಸಿ, ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles