34.6 C
Karnataka
Tuesday, April 15, 2025

ಮಹಿಳಾ ಪ್ರಧಾನ “ಮೀರಾ” ತುಳು ಸಿನಿಮಾ ಬಿಡುಗಡೆ

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ‌ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ಮಾಜಿ ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಿಡುಗಡೆ ಗೊಳಿಸಿದರು. ತುಳುವಿನಲ್ಲಿ ಬಿಡುಗಡೆ ಗೊಂಡಿರುವ ಮೀರಾ ಸಿನಿಮಾದಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ ಕತೆ ಇದೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳುವಿನಲ್ಲಿ ಈಗ ಉತ್ತಮ ಸದಭಿರುಚಿಯ ಸಿನಿಮಾಗಳು ಬರುತ್ತಿದೆ. ಅದರಲ್ಲೂ ಮೀರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮನೆಮಂದಿ ಎಲ್ಲರೂ ಇಂತಹ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸ ಬೇಕೆಂದರು,.
ನಿರ್ಮಾಪಕ ಲಂಚುಲಾಲ್ ಕೆ ಎಸ್ ಮಾತನಾಡಿ “ಮೀರಾ” ತುಳು ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಶೋ ಮೂಲಕ ಒಂದು ಕೋಟಿ ರೂಪಾಯಿ ಗಳಿಸಿದೆ ಎಂದರು. ನನ್ನ ನೂರು ಮಂದಿ ಹಿತೈಷಿಗಳು ತಲಾ ಒಂದು ಲಕ್ಷ ರೂಪಾಯಿಯಂತೆ ನೂರು ಟಿಕೇಟುಗಳನ್ನು ಖರೀದಿಸಿದ್ದಾರೆ. ಪ್ರೀಮಿಯರ್ ಶೋ ವೀಕ್ಷಿಸಿದ ಅವರೆಲ್ಲರೂ ಸಿನಿಮಾದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಸಮಾರಂಭದಲ್ಲಿ ನಟ ವಿಜೆ ವಿನೀತ್ ಕುಮಾರ್, ರಾಹುಲ್ ಅಮೀನ್, ತ್ರಿಶೂಲ್ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ ಬೈಕಂಪಾಡಿ, ಮೋಹನ್ ಕೆ ಬೋಳಾರ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೊಮೇಶ್ವರ, ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಅನೀಶ್ ಪೂಜಾರಿ, ಅನಿಲ್ ದಾಸ್, ಶರಣ್ ಚಿಲಿಂಬಿ, ಜೆಪಿ ತುಮಿನಾಡ್, ಪುಷ್ಪರಾಜ್ ಬೊಳ್ಳೂರು, “ಮೀರಾ” ಸಿನಿಮಾದ ನಿರ್ದೇಶಕ ಅಶ್ವಥ್, ನಟಿಯರಾದ ಇತಿಶಾ ಶೆಟ್ಟಿ, ಲಕ್ಷ್ಯ ಎಲ್ ಮೊದಲಾದವರು ಉಪಸ್ಥಿತರಿದ್ದರು. ಯತೀಶ್ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ‌ ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles