ಮ೦ಗಳೂರು:ಇಡೀ ವಿಶ್ವಾಧ್ಯಂತ ಚಲನ ಚಿತ್ರೋಧ್ಯಮವು ಕುಸಿತ ಕಂಡಿರುವಾಗ ಕೊಂಕಣಿ ಭಾಷೆಯ ಪ್ರಾದೇಶಿಕ ಚಿತ್ರವೊಂದು ನೂರು ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಸೀಮಿತ ಮಾರುಕಟ್ಟೆ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ. ಕೊಂಕಣಿಯಲ್ಲಿ ಚಲನಚಿತ್ರಗಳನ್ನು ತಯಾರಿಸುವುದು ಯಾವುದೇ ಲಾಭದ ನಿರೀಕ್ಷೆಯಿಂದಲ್ಲ, ವಿನಃ ಮಾತೃಭಾಷೆಯ ಮೇಲಿನ ಪ್ರೇಮದಿಂದ. ʻಪಯಣ್ʼ ಕೊಂಕಣಿಯಲ್ಲಿ ಇದುವರೆಗೆ ಬಂದಂತಹ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿದ್ದು, ಧನಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ
ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ಅದಕ್ಕಾಗಿ ನಾವು ʻಸಂಗೀತ್ ಘರ್ ಪ್ರೊಡಕ್ಷನ್ಸ್ʼ ಜೋಡಿ ಮೆಲ್ವಿನ್ ಪೆರಿಸ್ ಮತ್ತು ನೀಟ ಪೆರಿಸ್ ಇವರನ್ನು ಖಂಡಿತವಾಗಿಯೂ ಅಭಿನಂದಿಸಬೇಕುʼ ,ಎಂದರು ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿʼಸೋಜ. ಅವರು ಬಿಜೈನಲ್ಲಿರುವ ಭಾರತ್ ಸಿನೇಮಾದಲ್ಲಿ ʻಪಯಣ್ʼಕೊಂಕಣಿ ಚಲನಚಿತ್ರದ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ವಿಧ್ಯಾ ಸಂಸ್ಥೆಗಳ ರೆಕ್ಟರ್ ವಂ| ಫಾ| ಮೆಲ್ವಿನ್ ಜೋಸೆಫ್ ಪಿಂಟೊ, ಅನಿವಾಸಿ ಉಧ್ಯಮಿ ಶ್ರೀ ಜೇಮ್ಸ್ ಮೆಂಡೊನ್ಸಾ ಮತ್ತು ದಾಖಲೆ ನಿರ್ಮಿಸಿದ ʻಅಸ್ಮಿತಾಯ್ʼ ಕೊಂಕಣಿ ಚಿತ್ರ ನಿರ್ಮಾಪಕ, ʻಮಾಂಡ್ ಸೊಭಾಣ್ʼ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲುವಿ ಪಿಂಟೊ ಗೌರವ ಅಥಿತಿಳಾಗಿ ಹಾಜರಿದ್ದರು. ಪಯಣ್ ಸಿನಿಮಾ ನಿರ್ದೇಶಕ ʻಸಂಗೀತ್ ಗುರುʼ ಶ್ರೀ ಜೊಯೆಲ್ ಪಿರೇರಾ ವೇದಿಕೆಯಲ್ಲಿ ಹಾಜರಿದ್ದರು.
ಕೊಂಕಣಿಯ ಖ್ಯಾತ ಗಾಯಕ, ಪಯಣ್ ಚಲನಚಿತ್ರದ ನಿರ್ಮಾಪಕ ಮೆಲ್ವಿನ್ ಪೆರಿಸ್ರವರು ಚಲನಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ವೀಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸಿನಿಮಾ ನಟ, ಸಂಯೋಜಕ, ಸಂಘಟಕ ಶ್ರೀ ಲೆಸ್ಲಿ ರೇಗೊ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ʻಆಂಜೆಲೊರ್ ಕೊಯರ್ʼ ಪಂಗಡದವರು ಕ್ರಿಸ್ಮಸ್ ಹಾಡೊಂದನ್ನು ಹಾಡಿ ಟಾಕಿಸಿನಲ್ಲಿ ಕ್ರಿಸ್ಮಸ್ ಕಳೆ ತಂದರು. ಕಾರ್ಯಕ್ರಮದ ಕೊನೆಯಲ್ಲಿ ತುಂಬಿದ ಚಿತ್ರಮಂದಿರದಲ್ಲಿ ʻಪಯಣ್ʼ ಸಿನಿಮಾದ ಕೊನೆಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.