22 C
Karnataka
Friday, November 15, 2024

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿನ್ಯಾಸ ಬದಲಾವಣೆಗೆ ಕೇಂದ್ರ ಮೀನುಗಾರಿಕೆ ಸಚಿವರಿಗೆ ಮನವಿ

ಹೊಸದಿಲ್ಲಿ: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಪದಾಧಿಕಾರಿಗಳು ಗುರುವಾರ ನವದೆಹಲಿಯಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ಪಾರ್ಶೋತ್ತಮ್ ರೂಪಾಲರವರನ್ನು ಭೇಟಿ ಮಾಡಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (PMMSY) ಆಳ ಸಮುದ್ರದ ಮೀನುಗಾರಿಕೆ ಗಿಲ್ ನೆಟ್ ದೋಣಿಗಳ ವಿನ್ಯಾಸದಲ್ಲಿ ಕೆಲವು ಮಾರ್ಪಾಡು ಮಾಡುವಂತೆ ಮನವಿ ಸಲ್ಲಿಸಿದರು.

ದೋಣಿಯ ಉದ್ದವನ್ನು 22.70 ಮೀ ನಿಂದ 24.00 ಮೀ ಗೆ ಹೆಚ್ಚಿಸುವುದು. ಮತ್ತು ದೋಣಿಯ ಅಗಲ 6.40 ಮೀ ನಿಂದ 7.20 ಮೀ. ಹೆಚ್ಚಳ, ಎಂಜಿನ್ ಅಶ್ವಶಕ್ತಿಯನ್ನು 200 Hp ನಿಂದ 350 HP ಗೆ ಹೆಚ್ಚಿಸುವುದು.ದೋಣಿಯ ಹಿಂಭಾಗದಲ್ಲಿರುವ ಕ್ಯಾಬಿನ್ ಅನ್ನು ದೋಣಿಯ ಮಧ್ಯಕ್ಕೆ ಬದಲಾಯಿಸುವುದು, ಆಳ ಸಮುದ್ರದ ಮೀನುಗಾರಿಕೆ ಗಿಲ್ನೆಟ್/ಲಾಂಗ್ ಲೈನರ್ ಬೋಟ್ ಜೊತೆಗೆ ಪರ್ಸಿನ್ ಬೋಟ್ ನಿರ್ಮಾಣಕ್ಕೆ ಅನುಮತಿ ನೀಡುವುದು ಸೇರಿದಂತೆ ಮೀನುಗಾರರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಮಾನ್ಯ ಸಂಸದರ ನಿಯೋಗದ ಮನವಿಗೆ ಸ್ಪಂದಿಸಿದ ಮೀನುಗಾರಿಕಾ ಸಚಿವರು ಈ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಸುನಿಲ್, ನವಿಲ್ ದಾಸ್, ವಿವೇಕಾನಂದ, ಲೋಕನಾಥ್ ಹಾಗೂ ವಿಲಿಯಂ ಪ್ರಾನ್ಸಿಸ್ ಅವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles