ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ) ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಏಷ್ಯಾದ ಅತಿದೊಡ್ಡ ನಾಗರಿಕ ವಿಮಾನಯಾನ ಪ್ರದರ್ಶನವಾದ ವಿಂಗ್ಸ್ ಇಂಡಿಯಾ 2024 ರಲ್ಲಿ 5 ಮಿಲಿಯನ್ ಗಿಂತ ಕಡಿಮೆ ಪ್ರಯಾಣಿಕರ ವಿಭಾಗದಲ್ಲಿ ಈ ವಿಮಾನನಿಲ್ದಾಣವನ್ನು ಅತ್ಯುತ್ತಮ ವಿಮಾನ ನಿಲ್ದಾಣವೆಂದು ಆಯ್ಕೆ ಮಾಡಲಾಗಿದೆ.
ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ 2024 ರ ಜನವರಿ 18 ರಿಂದತೆಲಂಗಾಣದ ಹೈದರಾಬಾದ್ನಲ್ಲಿ 4 ದಿನಗಳ ಕಾರ್ಯಕ್ರಮವನ್ನು ಆಯೋಜಿಸಿವೆ.
ಜ.18 ರಂದು ಹೈದರಾಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ
ಸಿಂಧಿಯಾ ಪ್ರಶಸ್ತಿ ಪ್ರದಾನ ಮಾಡಿದರು. 2023 ರ ಕ್ಯಾಲೆಂಡರ್ ವರ್ಷದಲ್ಲಿ 19,27,466 ಪ್ರಯಾಣಿಕರನ್ನು ನಿರ್ವಹಿಸಿದ ವಿಮಾನ ನಿಲ್ದಾಣವು2022 ರ ಕ್ಯಾಲೆಂಡರ್ ವರ್ಷಕ್ಕೆ ಹೋಲಿಸಿದರೆ 14.17% ಬೆಳವಣಿಗೆಯನ್ನು ದಾಖಲಿಸಿದೆ. ಅಕ್ಟೋಬರ್ 31, 2020 ರ ವಾಣಿಜ್ಯ ಕಾರ್ಯಾಚರಣೆಯ ದಿನಾಂಕದಿಂದ 2023 ರ ಡಿಸೆಂಬರ್ನಲ್ಲಿ 2,03,654 ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಎಂಐಎ ತನ್ನ ಅತ್ಯಧಿಕಪ್ರಯಾಣಿಕರನ್ನು ನಿರ್ವಹಿಸಿದೆ.
