18.8 C
Karnataka
Wednesday, December 11, 2024

ಯುಎಇಯಲ್ಲಿ ಹೊಸ ದಾಖಲೆ ಬರೆದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ”

ಮಂಗಳೂರು : ಯುವ ನಟ – ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿ, ವಿನೀತ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಯುಎಇ ರಾಷ್ಟ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ದುಬೈಯಲ್ಲಿ ಜರುಗಿತು.
ಡಿಸೆಂಬರ್ 8 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಆತ್ಮನಂದ ರೈ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಿನೇಶ್ ಶೆಟ್ಟಿ ಕೊಟ್ಟಿಂಜ, ಸುಧಾಕರ ರಾವ್ ಪೇಜಾವರ, ಉದ್ಯಮಿಗಳಾದ ಡಾ. ಬು.ಅಬ್ದುಲ್ಲ, ಗುಣಶೀಲ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ, ಡಾ.ಶ್ರೀಮತಿ ರಶ್ಮಿ ನಂದ ಕಿಶೋರ್, ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಹಾಗೂ ಚಿತ್ರ ತಂಡದ ನಿರ್ಮಾಪಕರು, ಸಹ ನಿರ್ಮಾಪಕರು, ಚಿತ್ರದ ನಟ ನಟಿಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು.
ಚಿತ್ರದ ಫ್ಯಾಮಿಲಿ ವೀಡಿಯೋ ಹಾಡನ್ನು ಅಬುಧಾಬಿಯ ಉದ್ಯಮಿ ಸುಂದರ ಶೆಟ್ಟಿ ಬಿಡುಗಡೆಗೊಳಿಸಿದರು. ಕರ್ನಾಟಕ ಸಂಘ ರಾಸ್ ಅಲ್ ಕೈಮಾದ ಅಧ್ಯಕ್ಷ ಸಂತೋಷ್ ಹೆಗ್ಡೆ, ಸಂಘಟಕ ನೋಯಲ್ ಅಲ್ಮೇಡಾ, ಶಾನ್ ಪೂಜಾರಿ,ದೇವಿ ಪ್ರಸಾದ್ ಶೆಟ್ಟಿ, ಪಟ್ಲ ಫೌಂಡೇಷನ್ ಯುಎಇಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು, ವಸಂತ್ ಶೆಟ್ಟಿ, ಪತ್ರಕರ್ತ ರೋನ್ಸ್ ಬಂಟ್ವಾಳ, ವರದರಾಜ್ ಶೆಟ್ಟಿಗಾರ್, ರಾಜೇಶ್ ಕುತ್ತಾರ್, ಪ್ರಕಾಶ್ ಪಕ್ಕಳ, ದೀಪಕ್ ಪಾಲಡ್ಕ ಉಪಸ್ಥಿತರಿದ್ದರು. ಚಿತ್ರದ ವೀಡಿಯೋ ಹಾಡನ್ನು ನೋಡಿದ ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದರು.
ಚಿತ್ರದ ಪ್ರೀಮಿಯರ್ ಪ್ರದರ್ಶನದ ಪಾಸ್ ಗಳನ್ನು ಯುಎಇಯ ಚಿತ್ರದ ಪ್ರಾಯೋಜಕರಾದ ಮೋನಿಷ ಶರತ್ ಶೆಟ್ಟಿ, ಹರೀಶ್ ಬಂಗೆರ, ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್, ದೀಪಕ್ ಕುಮಾರ್ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.ಶೇಷವೆಂದರೆ ಈ ಚಿತ್ರವು ಬಿಡುಗಡೆಯ ಮೊದಲೇ ಯುಎಇ ಯಲ್ಲಿ 30 ಲಕ್ಷಗಳ ಗಳಿಕೆಯನ್ನು ಯುಎಇ ಚಿತ್ರ ಪ್ರಸ್ತುತಿ ಪ್ರಾಯೋಜಕರ ಮೂಲಕ ಗಳಿಸಿದ್ದು ತುಳು ಚಿತ್ರರಂಗದಲ್ಲಿ ನೂತನ ದಾಖಲೆ ಬರೆದಿದ್ದು , ಟಿಕೆಟ್ ಬಿಡುಗಡೆಯ ದಿನವೇ 1500ಕ್ಕೂ ಹೆಚ್ಚಿನ ಟಿಕೆಟ್ ಮಾರಾಟದೊಂದಿಗೆ ದಾಖಲೆಯ ಪುಟ ಸೇರಿಕೊಂಡಿದೆ.
ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರರಂಗದ ಪ್ರಬುದ್ಧ ಕಲಾವಿದರು ಅಭಿನಯಿಸಿದ ಈ ತುಳು ಚಿತ್ರದ ಪ್ರಿಮಿಯರ್ ಪ್ರದರ್ಶನವು ಯುಎಇಯ ಅಬುಧಾಬಿ, ದುಬೈ, ಶಾರ್ಜಾದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ.
ಕರಾವಳಿಯ ಪ್ರಬುದ್ಧ ಚಿತ್ರ ನಟರನ್ನೊಳಗೊಂಡ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರದಲ್ಲಿ ಕಥೆ ನಿರೀಕ್ಷೆ ಮೂಡಿಸಿ ಕಲಾ ರಸಿಕರನ್ನು ಕಾತರದಿಂದ ಕಾಯುವಂತಾಗಿಸಿದೆ ಎಂದು ಯು.ಎ.ಇ ಯಲ್ಲಿ ಚಿತ್ರ ಬಿಡುಗಡೆಯ ಜವಾಬ್ದಾರಿಯನ್ನು ಹೊತ್ತಿರುವ OMG ದುಬೈ ಸಂಸ್ಥೆ ಮತ್ತು ಸಂಘಟಕರಾದ ಸ್ವಸ್ತಿಕ್ ಆಚಾರ್ಯ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles