17.2 C
Karnataka
Wednesday, January 29, 2025

ತಾಯಿ, ಇಬ್ಬರು ಮಕ್ಕಳ ನಾಪತ್ತೆ

ಮಂಗಳೂರು: ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಸ್ಕೈ ಹೈಟ್ಸ್ ಅಪಾರ್ಟಮೆಂಟ್‍ನ ನಿವಾಸಿ ಮಂಜುಳಾ (31) ಕೃಷ್ಣ (8) ಹಾಗೂ ಖುಷಿ (6) ಎಂಬವರು ಜುಲೈ 31 ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಹರೆ:
ಮಂಜುಳಾ – ಎತ್ತರ 5 ಅಡಿ, ಸಾಧಾರಣ ಶರೀರ, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಕೆಂಪು ಬಣ್ಣದ ನೈಟಿ ಮತ್ತು ಹಸಿರು ಬಣ್ಣದ ಸಾಲು ಧರಿಸಿರುತ್ತಾರೆ. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

 ಕೃಷ್ಣ - ಎತ್ತರ 3. 1/2 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ, ಶಾಲಾ ಸಮವಸ್ತ್ರ ನೀಲಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.

ಖುಷಿ – ಎತ್ತರ 3 ಅಡಿ, ಸಾಧಾರಣ ಶರೀರ, ಗೋಧಿ ಮೈ ಬಣ್ಣ, ದುಂಡು ಮುಖ, ಶಾಲಾ ಸಮವಸ್ತ್ರ ಆಕಾಶ ನೀಲಿ ಬಣ್ಣದ ಶರ್ಟ್, ನೇವಿನೀಲಿ ಬಣ್ಣದ ಸ್ಕರ್ಟ್ ಧರಿಸಿರುತ್ತಾರೆ ಕನ್ನಡ ಭಾಷೆ ಮಾತನಾಡುತ್ತಾರೆ.

ಕಾಣೆಯಾದ ತಾಯಿ ಮಕ್ಕಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಮಂಗಳೂರು ನಗರ ದೂರವಾಣಿ ಸಂಖ್ಯೆ – 0824-2220800 ಅಥವಾ ಉಳ್ಳಾಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ – 0824-2466269 ಸಂಪರ್ಕಿಸುವಂತೆ ಉಳ್ಳಾಲ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles