20.7 C
Karnataka
Thursday, January 9, 2025

ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಧಿಡೀರ್ ಭೇಟಿ

ಮಂಗಳೂರು: ನಗರದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೋಗಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಆಸ್ಪತ್ರೆ ಯ ಹಿರಿಯ ಅಧಿಕಾರಿಗಳ ಅನುಪಸ್ಥಿತಿ ಕಂಡು ಬಂದಿದ್ದು ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ರೋಗಿಗಳ ಸಮಸ್ಯೆಗೆ ಕಾರಣವಾದ ಸರ್ವರ್ ದೋಷವನ್ನು ಸರಿಪಡಿಸಲು ಅಧಿಕಾರಿಗಳು ನೀಡಲಾಗಿರುವ ದೂರುಗಳ ಪತ್ರಗಳನ್ನು ಹಾಜರು ಪಡಿಸುವಂತೆ ತಿಳಿಸಿದರು. ಇದೆ ವೇಳೆ ಕಳೆದ ಹಲವಾರು ದಿನಗಳಿಂದ ಇಲ್ಲಿಗೆ ಬರುವ ರೋಗಿಗಳಿಗೆ ಸರ್ವರ್ ದೋಷವಿದೆ ಎಂದು ಹೇಳಿ, ದೂರದ ಊರುಗಳಿಂದ ಬರುವ ರೋಗಿಗಳು ಸತಾಯಿಸುವ ಬಗ್ಗೆ ಆಕ್ಷೇಪಣೆ ವ್ಯಕ್ತ ಪಡಿಸಿದ ಸಂಸದರು ಸರ್ವರ್ ಸಮಸ್ಯೆ ಇದ್ದರೆ ಇತರ ಆಸ್ಪತ್ರೆಗಳಿಗೆ ನೀಡುವ ಪತ್ರಗಳನ್ನು ಅಂತರ್ಜಾಲದಲ್ಲಿ ಆಗದಿದ್ದರೆ ಕೈ ಬರಹ ಮೂಲಕ ನೀಡಿ ಕೊಡಬೇಕು.ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು. ಈ ವೇಳೆ ಸಂದರ್ಭದಲ್ಲಿ ಮಾತನಾಡಿದ ಓರ್ವ ರೋಗಿಯ ಸಂಬ೦ಧಿಕರು ಕಳೆದ ಹಲವಾರು ವರ್ಷಗಳಿಂದ ಡಯಬಿಟಿಸ್ ರೋಗಿಗಳಿಗೆ ಡಯಾಲಿಸಿಸ್ ಮಾಡಲು ಒಂದು ತಿಂಗಳಿಗೆ 12 ಟೋಕನ್ ನೀಡಲಾಗುತ್ತಿತ್ತು. ಆದರೆ ಈಗ 3ತಿಂಗಳಿಗೆ ಟೋಕನ್ ನೀಡಲಾಗುತ್ತಿದ್ದು ಅದು ಸಹ ಈಗ ಸರ್ವರ್ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಸಿಗದೇ ಖಾಸಗಿ ಆಸ್ಪತ್ರೆಯಲ್ಲಿ ನಗದು ಹಣ ನೀಡಿ ಡಯಾಲಿಸಿಸಿ ಮಾಡಿಕೊಳ್ಳುವಂತಾಗಿದೆ.
ಅಲ್ಲದೆ ದೂರದ ಊರಿನಿಂದ ಬೆಳಗ್ಗೆ 8 ಗಂಟೆಗೆ ಬಂದ ನಮಗೆ ಈಗ ಸಂಜೆ 5ರ ತನಕವೂ ಸರ್ವರ್ ಸಮಸ್ಯೆ, ಸರಿ ಆಗಿಲ್ಲ ಎಂದರು ನಮಗೆ ಇಷ್ಟು ದೂರ ನಡೆಯಲು ಸಹ ಸಾಧ್ಯವಿಲ್ಲ. ಅಲ್ಲದೆ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಮಾತ್ರ ಟೋಕನ್ ನೀಡಲಾಗುವುದು ಎನ್ನುವ ನಿಯಮ ಬೇರೆ ಜಾರಿ ಮಾಡಿದ್ದಾರೆ ಎಂದರು. ಇಂದು ರೋಗಿಗಳಿಗೆ ಅವಶ್ಯ ವಾಗಿರುವ ಸೂಕ್ತ ದಾಖಲೆ ಗಳನ್ನು ಸ್ಥಳದಲ್ಲೇ ದೊರಕಿಸಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಮಸ್ಯೆ ಸರಿ ಪಡಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಸ್ಥಳದಲ್ಲಿದ್ದ ರೋಗಿಗಳು ಸಂತಸ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles