ಮುಲ್ಕಿ : ಮುಲ್ಕಿ ಜಂಕ್ಷನ್ ಬಳಿ ಲಾರಿಯೊ೦ದು ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ನುಗ್ಗಿ ಆಟೋ ರಿಕ್ಷಾ, ಸ್ಕೂಟರ್ ಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಗ್ಗೆ ಸ೦ಭವಿಸಿದ್ದು ಸ್ಕೂಟರ್ ಸವಾರ ಸಂಗಪ್ಪ ಗ೦ಭೀರ ಗಾಯಗೊ೦ಡಿದ್ದಾರೆ.ಸಹಸವಾರೆ, ಅವರ ಮಗಳಾದ ಸವಿತಾ ಸೇರಿದ೦ತೆ ಮೂವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ. ಅಪಘಾತದ ವೇಳೆ ಅ ಪ್ರದೇಶದಲ್ಲಿ ಹೆಚ್ಚಿನ ಜನಸ೦ದಣಿ ಇದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿ ಹೋಗಿದೆ.
ಬೆಳಗಿನ ಸುಮಾರು 9.30 ಗಂಟೆ ವೇಳೆಗೆ ಹೆಜಮಾಡಿ ಕಡೆಯಿಂದ ಮಂಗಳೂರು ಕಡೆಗೆ ಲಾರಿಯನ್ನು ಅತಿ ವೇಗ ಹಾಗೂ
ಅಜಾಗರೂಕತೆಯಿಂದ ಚಾಲಕ ಮಂಜುನಾಥ್ ಚಲಾಯಿಸಿಕೊಂಡು ಬ೦ದಿದ್ದು ಮುಲ್ಕಿ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡ ಬದಿಯ ಡಿವೈಡರ್ ದಾಟಿ ಸರ್ವಿಸ್ ರಸ್ತೆಯಲ್ಲಿ ಸಾಗಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ನಂತರ ಟ್ರಕ್ ಪುನಃ ಡಿವೈಡರ್ ದಾಟಿ ಮುಖ್ಯ ರಸ್ತೆಗೆ ಬಂದು ಸ್ವಲ್ಪ ದೂರ ಮುಂದಕ್ಕೆ ಚಲಿಸಿ ನಿ೦ತಿದೆ.ಅಪಘಾತದಿ೦ದ ಸ್ಕೂಟರ್ ಸವಾರ ಬಪ್ಪನಾಡು ನೇಚರ್ ಟೆಂಪಲ್ ಅಪಾರ್ಟ್ಮೆಂಟ್ ನಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡಿಕೊಂಡಿರುವ ಸಂಗಪ್ಪ, ಅವರು ಗಂಭೀರವಾಗಿ ಗಾಯಗೊಂಡಿದ್ದು ಸಹಸವಾರೆ, ಅವರ ಮಗಳಾದ ಸವಿತಾ ಅವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದೆ.
ಆಟೋ ಚಾಲಕ ಧರ್ಮೇಂದ್ರ ಹಾಗೂ ಮುಲ್ಕಿ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಸಂಚಾರ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ಗೀತಾ ಅವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿರುತ್ತವೆ. ಟ್ರಕ್ ಅನ್ನು ವಶಕ್ಕೆ ಪಡೆದು ಚಾಲಕ ಮಂಜುನಾಥ್ ನನ್ನು ದಸ್ತಗಿರಿ ಮಾಡಲಾಗಿದೆ.