ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಮನೆಗಳು, ಅಪಾರ್ಟ್‍ಮೆಂಟ್‍ಗಳು, ವ್ಯಾಪಾರಸ್ಥರು, ಕೈಗಾರಿಕೆಗಳು ಒಳ ಚರಂಡಿ ಜಾಲಕ್ಕೆ/ಮಷಿನ್ ಹೋಲ್‍ಗಳಿಗೆ ಮಳೆ ನೀರನ್ನು ಹರಿಯ ಬಿಡುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಒಳಚರಂಡಿ ಜಾಲದಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚಾಗಿ ಮಳೆ ನೀರು ಮಿಶ್ರಿತ ಒಳಚರಂಡಿ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಮಷಿನ್ ಹೋಲ್‍ಗಳಿಂದ ಒಳ ಚರಂಡಿ ನೀರು ಹೊರ ಸೂಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ಪೈಪ್‍ಗಳನ್ನು, ಕಟ್ಟಡದ ಛಾವಣಿಯ ಮಳೆ ನೀರಿನ ಹರಿವು ಅಥವಾ ಯಾವುದೇ ರೀತಿಯ ಮಳೆ ನೀರನ್ನು ಒಳಚರಂಡಿ ಜಾಲಕ್ಕೆ ಮತ್ತು ಮಷಿನ್ ಹೋಲ್‍ಗಳಿಗೆ ಸಂಪರ್ಕಿಸುವುದನ್ನು ಕಡ್ಡಾಯವಾಗಿ ನಿμÉೀಧಿಸಲಾಗಿದೆ. ಆದ್ದರಿಂದ ಈ ಕೂಡಲೇ ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ/ಮಷಿನ್ ಹೋಲ್‍ಗಳಿಗೆ ನೀಡಿರುವ ಕಟ್ಟಡದ ಮಳೆ ನೀರು ಸಂಪರ್ಕವನ್ನು ಕಡ್ಡಾಯವಾಗಿ ತೆರವುಗೊಳಿಸಲು ಸೂಚಿಸಿದೆ.
ಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳಿಂದ ಅನಧಿಕೃತ ಜೋಡಣೆಗಳ ಬಗ್ಗೆ ಸ್ಥಳ ಪರಿಶೀಲಿಸುತ್ತಿರುತ್ತಾರೆ. ನಿಯಮವನ್ನು ಉಲ್ಲಂಘಿಸಿ ಒಳ ಚರಂಡಿ ಜಾಲಕ್ಕೆ/ಮಷಿನ್ ಹೋಲ್ ಗಳಿಗೆ ಮಳೆ ನೀರನ್ನು ಹರಿಯ ಬಿಡುತ್ತಿರುವುದು ಕಲ್ಪಿಸಿರುವುದು ಕಂಡುಬಂದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ ನೀಡಿರುವುದು ಕಂಡು ಬಂದಲ್ಲಿ ಮೊದಲ ಬಾರಿಗೆ ರೂ 5,000/- ದಂಡವನ್ನು ವಿಧಿಸಲಾಗುತ್ತದೆ. ಹಾಗೂ ಕಾನೂನು ಕ್ರಮ ಕೈಗೊಳ್ಳಲು ನೋಟೀಸ್ ನೀಡಲಾಗುತ್ತದೆ. ನೋಟೀಸ್ ನೀಡಿದರೂ ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ ನೀಡಿರುವುದನ್ನು ಮುಂದುವರಿಸಿದಲ್ಲಿ ಪ್ರತಿ ದಿನ 1000 ರೂ.ಗಳನ್ನು ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘಿಸಿರುವ ಕಟ್ಟಡದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಅನಧಿಕೃತ ಜೋಡಣೆಯನ್ನು ಪಾಲಿಕೆ ವತಿಯಿಂದ ತೆರವುಗೊಳಿಸಿ ಕಾರ್ಯಾಚರಣೆಗೆ ತಗಲುವ ಮೊತ್ತವನ್ನು ಕಟ್ಟಡದ ಮಾಲೀಕರಿಗೆ ದಂಡ ವಿಧಿಸಿ ಹೆಚ್ಚುವರಿ ರೂ 25,000/- ವರೆಗೆ ದಂಡ ವಿಧಿಸಲಾಗುತ್ತದೆ.
ಮಂಗಳೂರು ನಗರವನ್ನು ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರ ಹಾಗೂ ಬೆಂಬಲವು ಮಹಾನಗರಪಾಲಿಕೆಗೆ ಅವಶ್ಯವಾಗಿರುತ್ತದೆ. ಸಾರ್ವಜನಿಕರು ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಮನೆಗಳು, ಅಪಾರ್ಟ್‍ಮೆಂಟ್‍ಗಳು, ವ್ಯಾಪಾರಸ್ಥರು, ಕೈಗಾರಿಕೆಗಳು ಮಳೆ ನೀರು ಪೈಪ್ ಗಳನ್ನು, ಕಟ್ಟಡದ ಛಾವಣಿಯ ಮಳೆ ನೀರಿನ ಹರಿವು ಅಥವಾ ಯಾವುದೇ ರೀತಿಯ ಮಳೆ ನೀರನ್ನು ಒಳಚರಂಡಿ ಜಾಲಕ್ಕೆ ಮತ್ತು ಮಷಿನ್ ಹೋಲ್ ಗಳಿಗೆ ಸಂಪರ್ಕಿಸಿರುವುದು ಕಂಡು ಬಂದಲ್ಲಿ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306, ವಾಟ್ಸಾಪ್ ಸಂಖ್ಯೆ 9449007722 ಗೆ ಮಾಹಿತಿಯನ್ನು ನೀಡಿ ನಗರವನ್ನು ಸ್ವಚ್ಚ ನಗರವನ್ನಾಗಿಸಲು ಪಾಲಿಕೆಯೊಂದಿಗೆ ಕೈಜೋಡಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
